ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 8 ಡಿಸೆಂಬರ್ 2019 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ಬಿಡುವಿದ್ದರೂ ಗೃಹ ಸಂಬಂಧೀ ಕೆಲಸಗಳಲ್ಲಿ ಅಧಿಕ ಕಾರ್ಯದೊತ್ತಡದಿಂದ ದೇಹ ಹೈರಾಣಾಗವುದು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಅಗತ್ಯ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ವೃಷಭ: ಆರ್ಥಿಕವಾಗಿ ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಅಪರಿಚಿತರನ್ನು ನಂಬಿ ಹೂಡಿಕೆ ಮಾಡಲು ಹೋಗಬೇಡಿ. ಕಾರ್ಮಿಕ ವರ್ಗದವರಿಗೆ ನೆಮ್ಮದಿಯಿರಲಿದೆ. ಕೌಟುಂಬಿಕವಾಗಿ ಬಂಧು ಮಿತ್ರರ ಆಗಮನಾಗಲಿದೆ. ಕಿರು ಸಂಚಾರ ಮಾಡುವಿರಿ.

ಮಿಥುನ: ಅವಿವಾಹಿತರಿಗೆ ಕಂಕಣ ಭಾಗ್ಯ ಶೀಘ್ರದಲ್ಲೇ ಕೂಡಿಬರಲಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಕೌಟುಂಬಿಕವಾಗಿ ಕೆಲವೊಂದು ಹೊಸ ಜವಾಬ್ಧಾರಿಗೆ ಸಿದ್ಧರಾಗಬೇಕಿದೆ. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆ ಅಗತ್ಯ.

ಕರ್ಕಟಕ: ಪ್ರೀತಿ ಪಾತ್ರರೊಂದಿಗೆ ಅಮೂಲ್ಯ ಸಮಯ ಕಳೆಯುವಿರಿ. ಕಿರು ಪ್ರವಾಸ, ಇಷ್ಟ ಭೋಜನ ಮಾಡುವ ಯೋಗವಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ವಿದ್ಯಾರ್ಥಿಗಳಲ್ಲಿ ಆಲಸ್ಯತನ ಕಂಡುಬರಬಹುದು.

ಸಿಂಹ: ವ್ಯವಹಾರದಲ್ಲಿ ಹೊಸ ಜನರ ಭೇಟಿಯಾಗುವಿರಿ. ವಾಹನ, ಭೂಮಿ ಖರೀದಿ ಯೋಗವಿದೆ. ಆದರೆ ಖರ್ಚು ವೆಚ್ಚ ಮಾಡುವ ಮೊದಲು ಹಿರಿಯರ ಸಲಹೆ ಪಡೆಯುವುದು ಉತ್ತಮ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವರು.

 
ಕನ್ಯಾ: ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸಲಿದ್ದೀರಿ. ಮರೆತೇ ಹೋಗಿದ್ದ ಸಂಬಂಧವೊಂದು ಮರಳಿ ಕೂಡಿಕೊಳ್ಳಲಿದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ. ಕೃಷಿಕರಿಗೆ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ತಾಳ್ಮೆ ಅಗತ್ಯ.

ತುಲಾ: ಇಷ್ಟ ಮಿತ್ರರ ಕಷ್ಟಗಳಿಗೆ ಸ್ಪಂದಿಸಲು ಹೋಗಿ ಸಂಕಷ್ಟಕ್ಕೆ ಸಿಲುಕುವಿರಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರುವುದು ಮುಖ್ಯ. ಕಳ್ಳತನದ ಭೀತಿಯಿದೆ ಎಚ್ಚರಿಕೆಯಿಂದಿರಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಯಾನ ಮಾಡುವ ಭಾಗ್ಯವಿದೆ. ಹಿರಿಯರು ಮಾಡಿದ್ದ ಹರಕೆ ತೀರಿಸುವ ಹೊಣೆ ನಿಮ್ಮ ಹೆಗಲಿಗೇರಲಿದೆ. ಆಸ್ತಿ ವಿಚಾರವಾಗಿ ದಾಯಾದಿಗಳೊಂದಿಗೆ ಮನಸ್ತಾಪವಾಗಬಹುದು. ಹಿರಿಯರ ಮಧ್ಯಸ್ಥಿಕೆಗೆ ಬೆಲೆ ಕೊಡಿ.

ಧನು: ಸಹೋದರ ಸಂಬಂಧಿಗಳ ಬಗ್ಗೆ ನಿಮ್ಮ ಅತಿಯಾದ ಪ್ರೀತಿ ಸಂಗಾತಿಯ ಮನಸ್ಸಿಗೆ ಕಿರಿ ಕಿರಿ ಉಂಟುಮಾಡಬಹುದು. ದುಡುಕಿ ಮಾತನಾಡಲು ಹೋಗಬೇಡಿ. ಮನೆಯಲ್ಲಿ ಹೊಸ ಜವಾಬ್ಧಾರಿಗಳನ್ನು ಹೊರಲು ಸಿದ್ಧರಾಗಿ. ದೇವತಾ ಪ್ರಾರ್ಥನೆಯಿಂದ ಶುಭಫಲ.

ಮಕರ: ಸಂಗಾತಿಯ ಮನದಾಸೆ ಪೂರೈಸುವಿರಿ. ಹಣಕಾಸಿನ ಹರಿವಿಗೆ ತೊಂದರೆಯಿರದು. ಸಾಲಗಾರರಿಂದ ಮುಕ್ತಿ ಸಿಗುವುದು. ಮಹಿಳಾ ಉದ್ಯೋಗಿಗಳಿಗೆ ಶುಭ ಫಲವಿದೆ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಕುಂಭ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಉದ್ಯೋಗ ರಂಗದಲ್ಲಿ ಬಿಡುವಿಲ್ಲದ ದುಡಿತ ಮನಸ್ಸಿಗೆ ಕಿರಿ ಕಿರಿಯಾಗಬಹುದು. ಸಾಮಾಜಿಕವಾಗಿ ನಿಮ್ಮ ಏಳಿಗೆ ಯಾರಿಂದಲೂ ತಡೆಯಲಾಗದು. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರ.

ಮೀನ: ಇಷ್ಟು ದಿನ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಹಿರಿಯರ ಸಲಹೆಗಳು ಪಥ್ಯವಾಗದೇ ಹೋಗಬಹುದು. ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ. ಕಿರು ಸಂಚಾರ ಸಾಧ‍್ಯತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ