ಮೇಷ: ಉದ್ಯೋಗ ಕ್ಷೇತ್ರದಲ್ಲಿ ಆಗುವ ಬದಲಾವಣೆಯಿಂದ ಮನಸ್ಸಿಗೆ ಖುಷಿಯಾಗುವುದು. ಮೇಲಧಿಕಾರಿಗಳ ವಿಶ್ವಾಸ ಗಳಿಸಲಿದ್ದೀರಿ. ಸಾಂಸಾರಿಕವಾಗಿ ನಿಮ್ಮ ತಾಳ್ಮೆಯೇ ನಿರ್ಣಾಯಕವಾಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ.
ವೃಷಭ: ಕಾರ್ಯರಂಗದಲ್ಲಿ ಉನ್ನತ ಸ್ಥಾನ ಮಾನದ ಯೋಗವಿದೆ. ಹೊಸ ದಾರಿಗಳು ಗೋಚರವಾಗಲಿದ್ದು, ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. ಆರ್ಥಿಕ ವಿಚಾರದಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮಿಥುನ: ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದುಕೊಂಡರೂ ಅನಿವಾರ್ಯ ಕಾರಣಗಳಿಂದ ಓಡಾಟ ನಡೆಸಬೇಕಾಗುತ್ತದೆ. ವ್ಯವಹಾರದಲ್ಲಿ ಜವಾಬ್ಧಾರಿ ಹೆಚ್ಚಾಗಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
ಕರ್ಕಟಕ: ವೃತ್ತಿರಂಗದಲ್ಲಿ ಕಷ್ಟದ ಸಮಯದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ. ಆರ್ಥಿಕವಾಗಿ ಬಾಕಿ ಹಣ ಸಂದಾಯವಾಗಿ ಹಣಕಾಸಿನ ಮುಗ್ಗಟ್ಟುಗಳು ನಿವಾರಣೆಯಾಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.
ಸಿಂಹ: ಮನುಷ್ಯ ಸಂಬಂಧದ ನಿಜವಾದ ಬೆಲೆ ಅರಿಯುವ ಕಾಲವಿದು. ನಿಮ್ಮ ತಾಳ್ಮೆಯ ಸತ್ವ ಪರೀಕ್ಷೆ ನಡೆಯಲಿದೆ. ಅಂದುಕೊಂಡಿದ್ದು ಸುಲಭವಾಗಿ ಕೈಗೆಟುಕದು. ಪರಿಶ್ರಮ ಪಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
ಕನ್ಯಾ: ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಕೌಟುಂಬಿಕವಾಗಿ ಸುಂದರ ಕ್ಷಣ ನಿಮ್ಮದಾಗಲಿದೆ. ಸಂಗಾತಿಗೆ ಉಡುಗೊರೆ ನೀಡಲಿದ್ದೀರಿ. ಪ್ರೇಮಿಗಳಿಗೆ ಅಗಲುವಿಕೆಯ ನೋವು ಕಾಡಲಿದೆ.
ತುಲಾ: ಬಹುದಿನಗಳಿಂದ ಅಂದುಕೊಂಡಿದ್ದ ನಿಮ್ಮ ಇಷ್ಟದ ಕೆಲಸಗಳನ್ನು ಪೂರೈಸಲಿದ್ದೀರಿ. ಪಾಲು ಬಂಡವಾಳ ಹೂಡಿಕೆಗೆ ಇದು ಸಕಾಲವಲ್ಲ. ಆರ್ಥಿಕವಾಗಿ ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆ ಅಗತ್ಯ. ಹಿತಶತ್ರುಗಳ ವಂಚನೆ ಬೆಳಕಿಗೆ ಬರಲಿದೆ.
ವೃಶ್ಚಿಕ: ಮನಸ್ಸಿನ ಭಾರ ಕಡಿಮೆಯಾಗಲು ಪ್ರೀತಿ ಪಾತ್ರರೊಂದಿಗೆ ದುಃಖ ದುಮ್ಮಾನ ಹಂಚಿಕೊಳ್ಳಲಿದ್ದೀರಿ. ಹಳೆಯ ನೆನಪುಗಳು ಮನಸ್ಸಿಗೆ ಬಾಧೆ ನೀಡಲಿವೆ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕುಲದೇವರ ಪ್ರಾರ್ಥನೆ ಮಾಡಿ.
ಧನು: ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಡಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ನೂತನ ದಂಪತಿಗಳಿಗೆ ಹೊಂದಾಣಿಕೆ ಕೊರತೆ ಕಾಣಬಹುದು. ತಾಳ್ಮೆ ಅಗತ್ಯ. ಕೆಳಹಂತದ ನೌಕರರಿಗೆ ಭವಿಷ್ಯದ ಚಿಂತೆ ಕಾಡಲಿದೆ.
ಮಕರ: ಕಣ್ಣೆದುರು ಬರುವ ಸವಾಲುಗಳನ್ನು ಎದುರಿಸಲು ಮನಸ್ಸಿಗೆ ಅಧೈರ್ಯವಾಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಕರೆಬರಲಿದೆ. ಗೃಹ ಸಂಬಂಧೀ ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.
ಕುಂಭ: ಇಷ್ಟ ಮಿತ್ರರ ಭೇಟಿ, ಭೋಜನ ಯೋಗವಿದೆ. ಪ್ರೀತಿ ಪಾತ್ರರ ಆರೋಗ್ಯ ವಿಚಾರದಲ್ಲಿ ಚಿಂತೆಯಾಗಬಹುದು. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಅವಿವಾಹಿತರ ವಿವಾಹ ಮಾತುಕತೆಗಳು ಮುಂದುವರಿಯಲಿದೆ.
ಮೀನ: ಮಹಿಳೆಯರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ಮಾನದ ಯೋಗವಿದೆ. ಚಿನ್ನಾಭರಣಗಳನ್ನು ಸಂರಕ್ಷಿಸುವ ಜವಾಬ್ಧಾರಿ ಹೆಗಲಿಗೇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.