ಮೇಷ: ಆರ್ಥಿಕವಾಗಿ ಆಗಾಗ ಹಣದ ಅಡಚಣೆ ಎದುರಾಗಲಿದ್ದು, ಅಂದುಕೊಂಡ ಕೆಲಸ ಕಾರ್ಯಗಳು ಅರ್ಧಕ್ಕೇ ನಿಲ್ಲಲಿವೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಪ್ರಯಾಣದಲ್ಲಿ ಜಾಗ್ರತೆ ಅಗತ್ಯವಿದೆ. ಕಿರು ಸಂಚಾರ ಮಾಡಬೇಕಾಗುತ್ತದೆ.
ವೃಷಭ: ನಿಮ್ಮ ಕೆಲಸ ಕಾರ್ಯಗಳಿಗೆ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ನೋವುಂಟುಮಾಡುವ ವಿಚಾರ ಕೇಳಬರಲಿದೆ. ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಸಾಂಸಾರಿಕವಾಗಿ ಉತ್ತಮ ಕೆಲಸಗಳಿಗೆ ಕೈ ಹಾಕುವಿರಿ.
ಮಿಥುನ: ಸಾಂಸಾರಿಕವಾಗಿ ಸಾಮರಸ್ಯದ ಕೊರತೆಯಿಂದ ಕಲಹಗಳಾಗುವ ಭೀತಿಯಿದೆ. ಆದಷ್ಟು ಯೋಚಿಸಿ ಮಾತನಾಡುವುದು ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಕ್ರಿಯಾತ್ಮಕವಾಗಿ ಯೋಚಿಸಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಚಿಂತೆ ಬೇಡ.
ಕರ್ಕಟಕ: ನಿಮ್ಮ ವೃತ್ತಿರಂಗದ ಸಮಸ್ಯೆಗಳಿಗೆ ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ವ್ಯಾಪಾರಿಗಳು ಹಿಂದೆ ಮಾಡಿದ್ದ ಪರಿಶ್ರಮಕ್ಕೆ ಇಂದು ಫಲ ಉಣ್ಣುವ ಯೋಗ. ಮಾನಸಿಕ ನೆಮ್ಮದಿಗೆ ತೊಂದರೆಯಾಗಲಿದೆ. ಮನಶ್ಶಾಂತಿಗಾಗಿ ದೇವರ ಮೊರೆ ಹೋಗಲಿದ್ದೀರಿ.
ಸಿಂಹ: ಕೆಳ ಹಂತದ ನೌಕರರಿಂದ ಕಿರಿ ಕಿರಿಯಾಗಲಿದೆ. ಸಾಂಸಾರಿಕವಾಗಿ ಉತ್ತಮ ಸಮಯ ನಿಮ್ಮದಾಗಲಿದೆ. ಸಂಗಾತಿಯೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ಹಿರಿಯರಿಗೆ ಆರೋಗ್ಯ ಸಮಸ್ಯೆ ಕಂಡುಬರಬಹುದು. ಕಾಳಜಿ ಅಗತ್ಯ.
ಕನ್ಯಾ: ಸಾಂಸಾರಿಕವಾಗಿ ಸಾಮರಸ್ಯದ ಕೊರತೆಯಿಂದ ಮೂರನೇ ವ್ಯಕ್ತಿಗಳು ಲಾಭ ಪಡೆಯಲಿದ್ದೀರಿ. ಮನಸ್ಸು ಉದ್ವೇಗಕ್ಕೊಳಗಾಗಿ ನಿರ್ಧಾರ ತೆಗೆದುಕೊಳ್ಳುವಾಗ ಎಡವುತ್ತೀರಿ. ಎಚ್ಚರಿಕೆ ಅಗತ್ಯ. ವ್ಯವಹಾರಗಳು ಕೈ ಹಿಡಿಯಲಿವೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
ತುಲಾ: ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಹೊಂದಲಿದ್ದೀರಿ. ನಿರುದ್ಯೋಗಿಗಳಿಗೆ ಬಯಸಿದ್ದನ್ನು ಪಡೆಯಲು ನಾನಾ ರೀತಿಯ ಸವಾಲುಗಳು ಎದುರಾಗಬಹುದು. ಮೊಸರಲ್ಲೂ ಕಲ್ಲು ಹುಡುಕುವವರ ಬಗ್ಗೆ ಚಿಂತೆ ಮಾಡಬೇಕಿಲ್ಲ. ದೇವತಾ ಪ್ರಾರ್ಥನೆ ಮಾಡಿ.
ವೃಶ್ಚಿಕ: ನಿಮ್ಮ ನಾಲಿಗೆ ಚಪಲದಿಂದ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಉಪೇಕ್ಷೆ ಬೇಡ. ಇಷ್ಟ ಮಿತ್ರರ ಭೇಟಿ ಯೋಗವಿದೆ. ಅವಿವಾಹಿತರಿಗೆ ವಿವಾಹ ಮಾತುಕತೆಗಳು ಫಲಪ್ರದವಾಗಲಿದೆ. ವಿದ್ಯಾರ್ಥಿಗಳಿಗೆ ಸತತ ಅಭ್ಯಾಸ ಅಗತ್ಯ.
ಧನು: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಸಿಕ್ಕ ಸಂತೋಷವಿರಲಿದೆ. ಆದರೆ ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಲಿದ್ದೀರಿ. ಅನಿವಾರ್ಯ ಕಾರಣಗಳಿಗೆ ದೂರ ಸಂಚಾರ ರದ್ದು ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮಕರ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಲಿದ್ದೀರಿ. ಸರಕಾರಿ ಕೆಲಸಗಳಲ್ಲಿ ಮುನ್ನಡೆ ಸಿಗಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ತಾಳ್ಮೆಯಿರಲಿ.
ಕುಂಭ: ಇಂದು ನೀವು ಎಷ್ಟು ತಾಳ್ಮೆಯಿಂದಿರುತ್ತೀರೋ ಅಷ್ಟು ಒಳ್ಳೆಯದು. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಮುನ್ನಡೆ ಸಿಗದೇ ನಿರಾಸೆಯಾದೀತು. ಹೆಜ್ಜೆ ಹೆಜ್ಜೆಗೂ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಮುಖ್ಯ. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆವಹಿಸಿ.
ಮೀನ: ಅಂದುಕೊಂಡ ಕೆಲಸಗಳು ಅಂದುಕೊಂಡ ರೀತಿಯಲ್ಲಿ ನಡೆಯದೇ ಇದ್ದಾಗ ನಿರಾಸೆಯಾಗುವುದು ಸಹಜ. ಆದರೆ ಆ ಪರಿಣಾಮವನ್ನು ಕುಟುಂಬ ಸದಸ್ಯರ ಮೇಲೆ ತೋರಿದರೆ ಮನೆಯಲ್ಲಿ ಕಲಹ ಗ್ಯಾರಂಟಿ. ದಾಂಪತ್ಯದಲ್ಲಿ ಶುಭ ಫಲಗಳು ಗೋಚರವಾಗಲಿದೆ.