ಮೇಷ: ಮನಸ್ಸಿಗೆ ಇಷ್ಟವಾದವರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷೆಗೆ ಮೀರಿದ ಲಾಭ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಧನಾರ್ಜನೆಗೆ ಅವಕಾಶಗಳು ಒದಗಿಬರಲಿದೆ. ಬಳಸಿಕೊಳ್ಳಿ.
ವೃಷಭ: ಬಂಧು ಬಳಗದವರ ಪ್ರೋತ್ಸಾಹಕರ ನುಡಿ ಮನಸ್ಸಿನ ಉತ್ಸಾಹ ಹೆಚ್ಚಿಸಲಿದೆ. ಕಾರ್ಯಕ್ಷೇತ್ರದಲ್ಲಿ ವಿಳಂಬಗತಿಯಲ್ಲಿ ಕೆಲಸಗಳು ಸಾಗಲಿವೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಕಾರ್ಯನಿಮಿತ್ತ ದೂರ ಸಂಚಾರ ಮಾಡಲಿದ್ದೀರಿ.
ಮಿಥುನ: ವಿಶೇಷ ವ್ಯಕ್ತಿಗಳ ಭೇಟಿಯಿಂದ ಕಾರ್ಯಸಾಧನೆಗೆ ಅನುಕೂಲವಾದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಚಿಂತನೆ ಹೊಳೆಯಲಿವೆ. ತಾಳ್ಮೆಯಿರಲಿ.
ಕರ್ಕಟಕ: ನಿಮ್ಮ ಮನಸ್ಸಿನ ಸಮಾಧಾನಕ್ಕೆ ಇತರರ ಕಷ್ಟಗಳಿಗೆ ನೆರವಾಗಲಿದ್ದೀರಿ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ ಕೂಡಿಬರುವುದು. ವ್ಯಾಪಾರಿಗಳಿಗೆ ಹಿತಶತ್ರುಗಳ ಕಾಟ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
ಸಿಂಹ: ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿದಾಯಕ ವಾತಾವರಣವಿರಲಿದ್ದು, ಅಂದುಕೊಂಡ ಕೆಲಸಗಳು ನೆರವೇರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಆರ್ಥಿಕ ಚೇತರಿಕೆ ಕಂಡುಬರಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು.
ಕನ್ಯಾ: ಮನೆಯಲ್ಲಿ ಬಂಧು ಮಿತ್ರರ ಆಗಮನದಿಂದ ಸಂತೋಷದ ವಾತಾವರಣವಿರಲಿದೆ. ಆದರೆ ನಿಮ್ಮ ಮಾತಿನಿಂದ ಇತರರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಿ. ವ್ಯವಹಾರದಲ್ಲಿ ಗುರಿ ಸಾಧಿಸಿ ತೃಪ್ತಿ ಕಂಡುಬರುವುದು.
ತುಲಾ: ಮನಸ್ಸಿನ ಆಸೆಗಳಿಗೆ ನಿಯಂತ್ರಣ ಹಾಕಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅಪವಾದದ ಭೀತಿ ಕಂಡುಬಂದೀತು. ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಕಂಡುಬಂದೀತು. ತಾಳ್ಮೆ ಅಗತ್ಯ.
ವೃಶ್ಚಿಕ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನವ್ಯಯ ಮಾಡಲಿದ್ದೀರಿ. ಸಾಲಗಾರರ ಚಿಂತೆ ಕಾಡಲಿದೆ. ಅನ್ಯರ ಕಷ್ಟಗಳಿಗೆ ನೆರವಾಗುವ ನಿಮ್ಮ ಗುಣ ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ. ಕಿರು ಓಡಾಟ ನಡೆಸಲಿದ್ದೀರಿ.
ಧನು: ಬೇರೆಯವರು ನಿಮ್ಮ ಬಗ್ಗೆ ಹೇಳುವ ಅಭಿಪ್ರಾಯಗಳಿಗೆ ಅತಿಯಾಗಿ ಕಿವಿಗೊಡುವುದನ್ನು ಬಿಡಿ. ಸಂಗಾತಿಯು ಸೂಕ್ತ ಸಮಯದಲ್ಲಿ ನೀಡುವ ಸಲಹೆಗಳಿಂದ ಸಮಸ್ಯೆಗಳಿಂದ ಪಾರಾಗಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
ಮಕರ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ.
ಕುಂಭ: ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ವಿಘ್ನಗಳು ಎದುರಾದೀತು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಭೂಮಿ ಖರೀದಿ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಸಂಚಾರದಲ್ಲಿ ಎಚ್ಚರಿಕೆಯಿಂದಿರಿ.
ಮೀನ: ಎಷ್ಟೋ ದಿನದಿಂದ ನೀವು ಅಂದುಕೊಂಡಿದ್ದ ಕೆಲಸಗಳು ಇಂದು ಸುಗಮವಾಗಿ ನೆರವೇರಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅನಗತ್ಯ ಚಿಂತೆ ಬೇಡ.