ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 3 ಅಕ್ಟೋಬರ್ 2021 (06:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವ್ಯವಹಾರದಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ಇರಲಿ. ಎಷ್ಟೇ ಧನಾಗಮನವಾದರೂ ಅತೃಪ್ತಿ, ಇನ್ನಷ್ಟು ಬೇಕಿತ್ತು ಎಂಬ ಭಾವ ಕಾಡಲಿದೆ. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆಗಳ ಮೂಲಕ ಖುಷಿಕೊಡಲಿದ್ದೀರಿ.

ವೃಷಭ: ಸಾಂಸಾರಿಕವಾಗಿ ಸುಂದರ ದಿನ ನಿಮ್ಮದಾಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ಎಷ್ಟೋ ದಿನಗಳಿಂದ ಬಾಕಿಯಿದ್ದ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ಕಿರು ಸಂಚಾರ ಮಾಡಬೇಕಾಗುತ್ತದೆ.

ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡುಬರಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಅದಕ್ಕೆ ಫಲ ಸಿಗಲಿದೆ. ಅವಿವಾಹಿತರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿವೆ.

ಕರ್ಕಟಕ: ಎಷ್ಟೋ ದಿನಗಳ ನಂತರ ನಿಮ್ಮ ಬಂಧು ಮಿತ್ರರನ್ನು ಭೇಟಿಯಾಗುವ ಯೋಗ ಕೂಡಿಬಂದೀತು. ಹಿತಶತ್ರುಗಳ ಕಾಟದಿಂದ ಮನಸ್ಸು ಹೈರಾಣಾದೀತು. ಹಿರಿಯರಿಗೆ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಸಿಂಹ: ವೈಯಕ್ತಿಕ ಜೀವನದ ಸುಧಾರಣೆಗೆ ಹೆಚ್ಚಿನ ಗಮನ ಕೊಡಲಿದ್ದೀರಿ. ಹೊಸ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾದೀತು. ಪರಸ್ಥಳಗಳಿಗೆ ಭೇಟಿಯಾಗಲಿದ್ದೀರಿ. ತಾಳ್ಮೆ, ಸಂಯಮವಿರಲಿ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸವಾಗಬೇಕಾದರೆ ಇನ್ನೊಬ್ಬರೊಂದಿಗೆ ಹೊಂದಾಣಿಕೆ ಅಗತ್ಯ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.

ತುಲಾ: ಸಾಂಸಾರಿಕವಾಗಿ ಹೆಚ್ಚು ಜವಾಬ್ಧಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಸಂಗಾತಿಯ ಸಲಹೆಗಳಿಗೆ ಕಿವಿಗೊಟ್ಟರೆ ಉತ್ತಮ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಕಠಿಣ ಪರಿಶ್ರಮ ಪಡಬೇಕಾದೀತು. ಚಿಂತೆ ಬೇಡ.

ವೃಶ್ಚಿಕ: ವ್ಯಾಪಾರ, ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದವರು ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಸಂಚಾರದಲ್ಲಿ ಎಚ್ಚರ.

ಧನು: ನಿಮ್ಮದಲ್ಲದ ವಸ್ತುವಿನ ಬಗ್ಗೆ ಮೋಹ ಬೆಳೆಸಬೇಡಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಪೋಷಕರೊಂದಿಗೆ ವಿನಾಕಾರಣ ಸಂಘರ್ಷ ಬೇಡ. ಸಹೋದರರಿಂದ ಅಚ್ಚರಿಯ ಉಡುಗೊರೆ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮಕರ: ನಿಮ್ಮಿಂದಾಗಿ ಮನೆಯಲ್ಲಿ ಇಂದು ಸಂತೋಷ ತುಂಬಿ ತುಳುಕಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಕೃಷಿಕರಿಗೆ ಬೆಳೆ ಹಾನಿ ಭೀತಿ.ಮಿತ್ರರ ಸಹಾಯ ಪಡೆಯಲಿದ್ದೀರಿ.

ಕುಂಭ: ಪತ್ನಿಯ ಸಮಸ್ಯೆಗಳನ್ನು ಪರಿಹರಿಸಲಿದ್ದೀರಿ. ಅನಗತ್ಯ ವಿಚಾರಗಳಿಗೆ ವಾಗ್ವಾದಕ್ಕಿಳಿಯಬೇಡಿ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ಜೋಪಾನ. ನೆರೆಹೊರೆಯವರು ನಿಮ್ಮ ಕಷ್ಟಕ್ಕೆ ಆಗಿ ಬರಲಿದ್ದಾರೆ. ಚಿಂತೆ ಬೇಡ.

ಮೀನ: ಕಾರ್ಯಾರಂಭದಲ್ಲಿ ವಿಘ್ನ ಭಯ ಕಂಡುಬಂದರೂ ಅಂತಿಮ ಜಯ ನಿಮ್ಮದಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಹಣಕಾಸಿನ ವಿಚಾರದಲ್ಲಿ ದುಡಕಿನ ನಿರ್ಧಾರ ಕೈಗೊಳ‍್ಳಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ