ಮೇಷ: ವೃತ್ತಿರಂಗದಲ್ಲಿ ಎಲ್ಲರನ್ನು ಸಮದೂಗಿಸಿಕೊಂಡು ಹೋಗಲು ಹರಸಾಹಸ ಪಡಬೇಕಾಗುತ್ತದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ನಿರಾಸೆಯಾದೀತು. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಗೆ ಖರ್ಚು ವೆಚ್ಚ ಮಾಡಲಿದ್ದೀರಿ.
ವೃಷಭ: ಅಂದುಕೊಂಡಿದ್ದನ್ನು ಮಾಡಲಾಗಲಿಲ್ಲ ಎಂಬ ಬೇಸರ ಕಾಡೀತು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಇಷ್ಟಮಿತ್ರರೊಂದಿಗೆ ಕಾಲ ಕಳೆಯಲು ಅವಕಾಶ ಸಿಗಲಿದೆ.
ಮಿಥುನ: ಉದ್ಯೋಗ ರಂಗದಲ್ಲಿ ನಿಮ್ಮ ಸ್ಥಾನ ಬದಲಾವಣೆಯಾಗಲಿದೆ. ಮನೆಗೆ ನೆಂಟರಿಷ್ಟರ ಆಗಮನ ಸಾಧ‍್ಯತೆ. ಸಹೋದರಾದಿ ವರ್ಗದವರಿಂದ ಕಿರಿ ಕಿರಿ ಎದುರಾದೀತು. ಸಂಗಾತಿಯ ಮಾತಿಗೆ ಕಿವಿಗೊಡುವುದು ಉತ್ತಮ.
ಕರ್ಕಟಕ: ಹೊಸ ಯೋಜನೆಗಳಿಗೆ ಕೈ ಹಾಕಲು ಇದು ಸಕಾಲ. ದೂರದ ಮಿತ್ರರ ಸಮಾಗಮ ಮನಸ್ಸಿಗೆ ಖುಷಿ ಕೊಡಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಗುರುಹಿರಿಯರೊಂದಿಗೆ ಸಂಘರ್ಷ ಬೇಡ.
ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಸುಖ ಸಮೃದ್ಧಿ. ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ. ಆದರೆ ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ.
ಕನ್ಯಾ: ಮನೆಯಲ್ಲಿ ನಡೆಯುವ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ನೆರೆಹೊರೆಯವರೊಂದಿಗೆ ಸಂಬಂಧ ಸುಧಾರಿಸಲಿದೆ. ಹೊಸ ಯೋಜನೆಗಳನ್ನು ಜಾರಿಗೆ ತರಲು ಇದು ಸಕಾಲ. ಅನಗತ್ಯ ಚಿಂತೆ ಬೇಡ.
ತುಲಾ: ವಿದ್ಯಾರ್ಥಿ ವೃಂದದವರಿಗೆ ಏಕಾಗ್ರತೆಯ ಕೊರತೆ ಉಂಟಾದೀತು. ಪಾಲುದಾರಿಕೆ ಕ್ಷೇತ್ರದಲ್ಲಿ ಅಭಿವೃದ್ಧಿಯ ವಾತಾವರಣ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.
ವೃಶ್ಚಿಕ: ಆತುರದಲ್ಲಿ ನಿರ್ಧಾರ ತೆಗೆದುಕೊಳ‍್ಳಲು ಹೋಗಬೇಡಿ. ಬಂಧು ಮಿತ್ರರ ಸಹಕಾರ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ನಿಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಇದು ಸಕಾಲ.
ಧನು: ಹಿಂದೆ ನಿಮ್ಮ ಶತ್ರುಗಳಾಗಿದ್ದವರು ಇಂದು ಮಿತ್ರರಾಗಲಿದ್ದೀರಿ. ಹಳೆಯ ಬಾಕಿ ತೀರಿಸಲು ಇದು ಸಕಾಲ. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ದೇಹಾಯಾಸವಾದೀತು. ಹಳೆಯ ಮಿತ್ರರನ್ನು ಭೇಟಿ ಮಾಡಲಿದ್ದೀರಿ.
ಮಕರ: ನಾಲಿಗೆ ಚಪಲಕ್ಕೆ ಕಡಿವಾಣ ಹಾಕದಿದ್ದರೆ ಉದರ ಸಮಸ್ಯೆಯಾದೀತು. ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದಿನದಂತ್ಯಕ್ಕೆ ನೆಮ್ಮದಿ.
ಕುಂಭ: ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಇಷ್ಟ ಭೋಜನ ಮಾಡುವ ಯೋಗ. ಹಿರಿಯರಿಗೆ ಸಾಮಾಜಿಕ ಕೆಲಸಗಳಿಂದ ತೃಪ್ತಿ ಸಿಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.
ಮೀನ: ವಿವಾಹಾದಿ ಪ್ರಯತ್ನಗಳಿಗೆ ಮುನ್ನಡೆ ಕಂಡುಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.