ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 27 ನವೆಂಬರ್ 2022 (08:19 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವ್ಯವಹಾರದಲ್ಲಿ ಇತರರ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಗೆ ಅವಕಾಶ ನೀಡಿ. ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಮುನ್ನಡೆ. ಆಪ್ತರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಪ್ರಯತ್ನ ಪಡಲಿದ್ದೀರಿ. ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಗೃಹ ವಾಹನಾದಿ ಸೌಕರ್ಯಗಳು ನಿಮ್ಮದಾಗಲಿವೆ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಸಂದರ್ಭಕ್ಕೆ ತಕ್ಕಂತೆ ಜಾಣತನ ಪ್ರದರ್ಶನ ನೀಡುವುದರಿಂದ ಸಮಸ್ಯೆಗಳಿಂದ ಪಾರಾಗಲಿದ್ದೀರಿ. ವಾಹನಾದಿ ಖರೀದಿಗೆ ಮುಂದಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಸಿಗಲಿವೆ.

ಕರ್ಕಟಕ: ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ. ಯಂತ್ರೋಪಕರಣಗಳಿಂದ ತೊಂದರೆಗಳಾಗುವ ಸಾಧ್ಯತೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಕೌಟುಂಬಿಕವಾಗಿ ಸುಖ, ಸಮೃದ್ಧಿಯಿರಲಿದೆ.

ಸಿಂಹ: ಹಿರಿಯರಿಗೆ ದೇವತಾ ಸ್ಥಳಗಳ ಸಂದರ್ಶನ ಮಾಡಿದ ತೃಪ್ತಿ ಸಿಗುವುದು. ವ್ಯವಹಾರದಲ್ಲಿ ಉಳಿತಾಯಕ್ಕೆ ಪ್ರಾಮುಖ್ಯತೆ ನೀಡಲಿದ್ದೀರಿ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ದೂರ ಸಂಚಾರದಿಂದ ದೇಹಾಯಾಸವಾದೀತು.

ಕನ್ಯಾ: ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನ ಸಾಧ‍್ಯತೆ. ಕೌಟುಂಬಿಕವಾಗಿ ಸಂತೋಷವಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಭೀತಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಅನಗತ್ಯ ಚಿಂತೆ ಬೇಡ.

ತುಲಾ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಅಡಚಣೆಗಳು ಬಂದೀತು. ಇಷ್ಟಮಿತ್ರರನ್ನು ಭೇಟಿಯಾಗುವ ಯೋಗ. ಇಷ್ಟ ಭೋಜನ ಮಾಡುವ ಯೋಗ ನಿಮ್ಮದಾಗುವುದು. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ.

ವೃಶ್ಚಿಕ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಅತಿಯಾದ ಯೋಚನೆ ಬೇಡ. ಮನಸ್ಸಿನಲ್ಲಿದ್ದ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಲಿದ್ದೀರಿ. ಮಾತಿನ ಮೇಲೆ ನಿಗಾ ಇರಲಿ.

ಧನು: ಗುರುಹಿರಿಯರೊಂದಿಗೆ ಚರ್ಚಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಶುಭ ಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ. ಬಂಧು ಮಿತ್ರರನ್ನು ಭೇಟಿಯಾದ ಸಂತೋಷ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ದೂರದ ಮಿತ್ರರಿಂದ ಸಹಾಯ ಸಿಗುವುದು. ಹಣಕಾಸಿನ ವಿಚಾರದಲ್ಲಿ ಆಪ್ತರೊಂದಿಗೆ ಸಂಘರ್ಷವಾಗುವ ಸಾಧ‍್ಯತೆ. ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಪ್ರಾಪ್ತಿಯಾಗುವ ಸಾಧ್ಯತೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ಕುಂಭ: ಕೋರ್ಟು ಕಚೇರಿ ವ್ಯವಹಾರಗಳಿಗೆ ಸಿದ್ಧತೆ ನಡೆಸಲಿದ್ದೀರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ವಸ್ತು ಸ್ಥಿತಿ ಅರಿತು ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರಲಿದೆ.

ಮೀನ: ವೈಯಕ್ತಿಕ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಪೂರ್ವಾಪರ ವಿಚಾರಿಸಿ ಅಪರಿಚಿತರೊಂದಿಗೆ ವ್ಯವಹಾರ ನಡೆಸುವುದು ಉತ್ತಮ. ಭೂಮಿ, ವಾಹನಾದಿ ಖರೀದಿ ವಿಚಾರದಲ್ಲಿ ಮುನ್ನಡೆ. ದೇವತಾ ಪ್ರಾರ್ಥನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ