ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 23 ಜೂನ್ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಅಧ್ಯಯನ ನಿರತರಿಗೆ ಅನುಕೂಲಕರ ವಾತಾವರಣವಿರಲಿದೆ. ಉದ್ಯೋಗ, ವ್ಯವಹಾರದಲ್ಲಿ ಅಪರಿಚಿತರೂ ಸಹಾಯ ಮಾಡಲಿದ್ದಾರೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ತೃಪ್ತಿ ನಿಮ್ಮದಾಗುವುದು.

ವೃಷಭ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ. ಸಾಂಸಾರಿಕ ವಿಚಾರದಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ.

ಮಿಥುನ: ಗಣ್ಯ ವ್ಯಕ್ತಿಗಳ ಸಂಪರ್ಕ ಮಾಡಲಿದ್ದೀರಿ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಉನ್ನತಿಯ ಯೋಗ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಇಷ್ಟ ಭೋಜನ ಮಾಡುವ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅಡಚಣೆಗಳು ಬಂದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಭೂಮ್ಯಾದಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ.

ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಸಾಮಾಜಿಕ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಹಿರಿಯರಿಗೆ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾದೀತು. ಕಿರು ಸಂಚಾರ ನಡೆಸಲಿದ್ದೀರಿ.

ಕನ್ಯಾ: ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಬೇಕಾಗುತ್ತದೆ. ಪಾಲುದಾರಿಕಾ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಹಿಂಜರಿಕೆ ಕಂಡುಬಂದೀತು. ಸಂಗಾತಿಯ ಸಮಯೋಚಿತ ಸಲಹೆಗಳು ಉಪಯೋಗಕ್ಕೆ ಬರಲಿದೆ.

ತುಲಾ: ಅತಿಯಾದ ಕೆಲಸದಿಂದ ದೇಹಾಯಾಸವಾದೀತು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಯಿರಲಿ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ. ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ.

ವೃಶ್ಚಿಕ: ಆಸ್ತಿ ವಿಚಾರದಲ್ಲಿ ಬೇರೆಯವರ ಸಲಹೆ ಪಡೆಯಲಿದ್ದೀರಿ. ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿಬರಲಿದೆ. ತಾಳ್ಮೆಯಿರಲಿ.

ಧನು: ಮಕ್ಕಳಿಂದ ಸಂತೋಷ ವೃದ್ಧಿಯಾಗಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಲ್ಲಿ ಸಮಯ ಕಳೆದು ಹೋದೀತು. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ಕೆಳ ಹಂತದ ನೌಕರರಿಗೆ ಹೊಸ ಅವಕಾಶಗಳು ಕಂಡುಬರಲಿದೆ.

ಮಕರ: ಸರಕಾರೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ಇಷ್ಟ ವ್ಯಕ್ತಿಗಳ ಜೊತೆ ಮನಸ್ಸು ಬಿಚ್ಚಿ ಮಾತನಾಡಲು ಅವಕಾಶ ಸಿಗಲಿದೆ.

ಕುಂಭ: ಇಂದು ದೈವಾನುಕೂಲದಿಂದ ನೀವು ಕೈ ಹಿಡಿಯುವ ಕೆಲಸಗಳು ಯಶಸ್ವಿಯಾಗಲಿದೆ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಅನಿರೀಕ್ಷಿತವಾಗಿ ಸಿಗುವ ವ್ಯಕ್ತಿಗಳಿಂದ ನಿಮಗೆ ಉಪಕಾರವಾದೀತು.

ಮೀನ: ಹಣಕಾಸಿನ ವಿಚಾರದಲ್ಲಿ ಅನಿವಾರ್ಯವಾಗಿ ಬೇರೆಯವರನ್ನು ಅವಲಂಬಿಸುವ ಪರಿಸ್ಥಿತಿ ಬಂದೀತು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಪ್ರಗತಿ. ಕ್ಷುಲ್ಲುಕ ಕಾರಣಕ್ಕೆ ಆಪ್ತರೊಂದಿಗೆ ಭಿನ್ನಾಭಿಪ್ರಾಯ ತಂದುಕೊಳ್ಳಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ