ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಅನುಕೂಲವಿಲ್ಲದಿದ್ದರೆ ಇಲ್ಲಿ ಸುಬ್ರಹ್ಮಣ್ಯನ ಸೇವೆ ಸಲ್ಲಿಸಬಹುದು

ಗುರುವಾರ, 6 ಅಕ್ಟೋಬರ್ 2022 (07:50 IST)
WD
ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಂತೇ ನಮ್ಮ ರಾಜ್ಯದಲ್ಲಿ ಸರ್ಪ ಸಂಸ್ಕಾರ, ಸುಬ್ರಹ್ಮಣ್ಯ ಸೇವೆಗೆ ಹೆಸರು ವಾಸಿಯಾಗಿರುವ ಇನ್ನೊಂದು ದೇವಸ್ಥಾನವೆಂದರೆ ಘಾಟಿ ಸುಬ್ರಹ್ಮಣ್ಯ.

ಬೆಂಗಳೂರು ಸಮೀಪ ದೊಡ್ಡ ಬಳ್ಳಾಪುರದಲ್ಲಿರುವ ಈ ದೇವಾಲಯದಲ್ಲಿ ಕಾರ್ತಿಕೇಯ ಮತ್ತು ನರಸಿಂಹ ದೇವರ ಮೂರ್ತಿ ಒಂದೇ ಕಡೆ ನೋಡಬಹುದು. ಸುಮಾರು 600 ವರ್ಷಗಳು ಹಳೆಯದಾದ ದೇವಸ್ಥಾನದಲ್ಲಿ ದೇವರ ಮೂರ್ತಿ ಭೂಮಿಯ ಅಡಿಯಿಂದಲೇ ಉದ್ಭವವಾಗಿದೆ ಎಂದು ನಂಬಲಾಗಿದೆ.

ಸಾಮಾನ್ಯವಾಗಿ ಮಕ್ಕಳಾಗದ ದಂಪತಿ, ವಿವಾಹಾಪೇಕ್ಷಿತ ದಂಪತಿ, ಸರ್ಪದೋಷವವಿರುವವರು ಸುಬ್ರಹ್ಮಣ್ಯನ ಆರಾಧನೆ ಮಾಡಿದರೆ ಉತ್ತಮ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಅನುಕೂಲವಿಲ್ಲದೇ ಹೋದರೆ ಇಲ್ಲಿ ಬಂದು ಹರಕೆ ಸಲ್ಲಿಸಿ ದೇವರ ಪೂಜೆ ಮಾಡಿದರೆ ಸಂತಾನ ಭಾಗ್ಯ, ವಿವಾಹ ಭಾಗ್ಯ ಸಿಗುವುದು ಎಂಬ ನಂಬಿಕೆಯಿದೆ.

Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ