ಸಂಕ್ರಾಂತಿ ಮುಹೂರ್ತ ಮತ್ತು ರಾತ್ರಿ ಆಚರಣೆ ಯಾಕಿಲ್ಲ?

ಶನಿವಾರ, 14 ಜನವರಿ 2023 (09:00 IST)
Photo Courtesy: facebook
ಬೆಂಗಳೂರು: ಮಕರ ಸಂಕ್ರಾಂತಿ ಆಚರಣೆ ಯಾವಾಗ ಎಂದು ಗೊಂದಲ ಅನೇಕರಲ್ಲಿದೆ. ಜನವರಿ 14 ಮತ್ತು ಜನವರಿ 15 ರ ದಿನಾಂಕದಲ್ಲಿ ಯಾವ ದಿನ ಹಬ್ಬದ ಆಚರಣೆ ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಕರ ಸಂಕ್ರಾಂತಿಯ ಮುಹೂರ್ತ ಇಂದು ಅಂದರೆ ಜನವರಿ 14 ರಂದು ರಾತ್ರಿ 8.45 ಕ್ಕೆ. ಸಂಕ್ರಾಂತಿಯಂದು ಸ್ನಾನ, ದಾನ ಮಾಡುವುದು ಪದ್ಧತಿ. ಆದರೆ ಸಂಕ್ರಾಂತಿ ಸ್ನಾನ ಮತ್ತು ದಾನ ರಾತ್ರಿ ಮಾಡುವಂತಿಲ್ಲ.

ಆದ್ದರಿಂದ ಉದಯ ತಿಥಿ ಎಂದರೆ ಸೂರ್ಯೋದಯವಾದಾಗ ಮಕರ ಸಂಕ್ರಾಂತಿ ಸ್ನಾನ ಮಾಡಬೇಕು ಎಂದು ಹೇಳುತ್ತಾರೆ. ಈ ಕಾರಣಕ್ಕೆ ಇಂದು ರಾತ್ರಿ ಮುಹೂರ್ತವಿರುವ ಕಾರಣ ನಾಳೆ ಸಂಕ್ರಾಂತಿ ಆಚರಣೆ ಮಾಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ