ಬೆಂಗಳೂರು:ಈ ಸಿನಿಮಾಗಳಿಗೂ ಹಾಗೂ ಜನರ ಫ್ಯಾಶನ್ ಗಳಿಗೂ ನಂಟು ಹೊಸತಲ್ಲ. ಸಿನಿಮಾ ನೋಡಿ ಜನ ಹೊಸ ಹೊಸ ಫ್ಯಾಶನ್ ಗಳನ್ನು ಅನುಸರಿಸುತ್ತಲೇ ಇರುತ್ತಾರೆ. ಈಗ ಈ ವಿಷಯ ಯಾಕೆ ಅಂದ್ರೆ ಬಾಹುಬಲಿ ಚಿತ್ರ ತೆರೆಕಂಡು ಸಿನಿಲೋಕದಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿದ್ದು ಗೊತ್ತಿದೆ. ಅದೇ ಬಾಹುಬಲಿ ಚಿತ್ರದ ಆಭರಣ, ಸೀರೆ ಬಾಜುಬಂಧಿಗಳು ಮಹಿಳೆಯರಲ್ಲಿ ಪ್ಯಾಷನ್ ಕ್ರೇಜ್ ನ್ನು ಹೆಚ್ಚಿಸಿರುವುದು ವಿಶೇಷ.
ಅಂದಹಾಗೆ ಬಾಹುಬಲಿಯಲ್ಲಿ ಅನುಷ್ಕಾ ಶೆಟ್ಟಿ ಹಾಗೂ ರಮ್ಯಕೃಷ್ಣ ಧರಿಸಿರುವ ಬಾಜುಬಂಧ್ ಮಹಿಳೆಯರಲ್ಲಿ ಹೊಸ ಸ್ಟೈಲ್ ನ್ನು ಹುಟ್ಟುಹಾಕಿದೆ. ಆಂಟಿಕ್ ವಿನ್ಯಾಸದ ಬಾಜುಬಂಧ್ ಟೆಡಿಷನ್ಲ್ ಉಡುಪಿಗೆ ಸಖತ್ ಸೂಟ್ ಆಗುವುದರಿಂದ ನೋಡಲು ಚೆನ್ನಾಗಿ, ಆಕರ್ಷಣೀಯವಾಗಿ ಕಾಣುತ್ತೆ. ಒಟ್ಟಿನಲ್ಲಿ ಬಾಹುಬಲಿ ಚಿತ್ರ ಮಹಿಳೆಯರಲ್ಲಿ ಬಾಜುಬಂಧ್ ಕ್ರೇಜ್ ನ್ನು ಹುಟ್ಟುಹಾಕಿದೆ.