ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

Krishnaveni K

ಮಂಗಳವಾರ, 22 ಜುಲೈ 2025 (09:42 IST)
Photo Credit: AI Image
ಕೆಲವರಿಗೆ ಸುಮ್ಮನೇ ಕೂತಿದ್ದಾಗ ಕೈ ಲಟಿಕೆ ತೆಗೆಯುವ ಅಭ್ಯಾಸವಿರುತ್ತದೆ. ಇದು ಕೆಲವರಿಗೆ ಚಟವಾಗಿ ಬಿಟ್ಟಿರುತ್ತದೆ. ಆದರೆ ಈ ರೀತಿ ಮಾಡುವುದು ಎಷ್ಟು ಅಪಾಯಕಾರಿ ಎಂದು ನಿಮಗೆ ಗೊತ್ತಾ?

ಕೈ ಬೆರಳುಗಳನ್ನು ಲಟಿಕೆ ತೆಗೆಯುವಾಗ ಶಬ್ಭ  ಬರುತ್ತದೆ. ಆಗ ಮನಸ್ಸಿಗೂ ಏನೋ ತೃಪ್ತಿಯಾದಂತೆ ಆಗುತ್ತದೆ. ಆದರೆ ಈ ರೀತಿ ಲಟಿಕೆ ತೆಗೆಯುವುದು ಅಪಾಯಕಾರಿ. ಆರೋಗ್ಯದ ದೃಷ್ಟಿಯಿಂದ ಇದು ದುರಭ್ಯಾಸವಾಗಿರುತ್ತದೆ. ಹೇಗೆ ಅಂತೀರಾ? ಅದಕ್ಕೂ ಕಾರಣವಿದೆ.

ಜಾಯಿಂಟ್ಸ್ ಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಸೈನೋವೈಲ್ ಫ್ಯೂಡ್ ಎಂಬ ಲಿಕ್ವಿಡ್ ಇರುತ್ತದೆ. ಇದರಲ್ಲಿ ಕಾರ್ಬನ್ ಡೈ ಆಕ್ಸೈಡ್ ಸಂಗ್ರಹವಾಗಿರುತ್ತದೆ. ಲಟಿಕೆ ತೆಗೆಯುವಾಗ ಈ ಗುಳ್ಳೆಗಳು ಒಡೆದು ಶಬ್ಧ ಉಂಟು ಮಾಡುತ್ತದೆ. ಪದೇ ಪದೇ ಲಟಿಕೆ ತೆಗೆದರೆ ಸೈನೋವೈಲ್ ಫ್ಯೂಡ್ ಲಿಕ್ವಿಡ್ ಖಾಲಿಯಾಗುತ್ತದೆ.

ಇದರ ಅಂಶ ಕಡಿಮೆಯಾದಾಗ ಶರೀರದಲ್ಲಿ ಗಂಟು ನೋವುಗಳು ಶುರುವಾಗುತ್ತದೆ. ಸೈನೋವೈಲ್ ಕೊರತೆಯಿಂದ ಮೂಳೆಗಳ ನಡುವೆ ಘರ್ಷಣೆಯಾಗುತ್ತದೆ. ಇದರಿಂದ ಕೀಲುನೋವು ಬರುತ್ತದೆ. ಮಾತ್ರವಲ್ಲ ಕೈಗಳ ಹಿಡಿತ ದುರ್ಬಲವಾಗುತ್ತದೆ. ವಯಸ್ಸಾಗುತ್ತಿದ್ದಂತೇ ಈ ನೋವು ಹೆಚ್ಚಾಗಿ ನಡೆದಾಡಲು, ಕೆಲಸ ಕಾರ್ಯಗಳನ್ನು ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಈ ಅಭ್ಯಾಸವಿದ್ದರೆ ಅದನ್ನು ಬಿಡುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ