ಟ್ಯಾಟೂ ಪ್ರಿಯರೇ? ಹಾಗಿದ್ದರೆ ಎಚ್ಚರವಿರಲಿ!

ಗುರುವಾರ, 8 ಜೂನ್ 2017 (10:14 IST)
ಬೆಂಗಳೂರು: ಟ್ಯಾಟೂ ಹಾಕಿಸಿಕೊಳ್ಳುವ ಹುಚ್ಚು ನಿಮಗಿದೆಯೇ? ಹಾಗಿದ್ದರೆ ನೀವು ಎಚ್ಚರವಿರಲೇಬೇಕು. ಅದು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ನೀವು ಗಮನಹರಿಸಬೇಕು.

 
ಕೆಲವರಿಗೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಅಲರ್ಜಿ ಮತ್ತಿತರ ಸಮಸ್ಯೆಗಳು ತಲೆದೋರುತ್ತವೆ. ಕೈಯಲ್ಲಿ ಕೆಂಪಗಿನಗ ಗುಳ್ಳೆಗಳಾಗುವುದು, ತುರಿಕೆ, ಚರ್ಮ ಬಣ್ಣ ಕಳೆದುಕೊಳ್ಳುವುದು ಇತ್ಯಾದಿ ಸಮಸ್ಯೆಗಳೂ ಬರಬಹುದು.

ಗಾಯವಾದ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಗಾಯಗಳಲ್ಲಿ ಸೋಂಕುಂಟಾಗಿ ಅದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಬಹುದು. ಒಂದೊಂದು ದೇಹ ಪ್ರಕೃತಿಯವರಿಗೆ ಒಂದೊಂದು ಥರದ ಸೋಂಕುಂಟಾಗುವ ಸಾಧ್ಯತೆಯಿದೆ.

ಆದರೆ ಹೆದರಬೇಕಿಲ್ಲ. ಟ್ಯಾಟೂ ಹಾಕುವ ಮೊದಲು ಸುರಕ್ಷತೆಗೆ ಗಮನ ಕೊಡಿ. ಟ್ಯಾಟೂ ಹಾಕುವ ಸಲಕರಣೆ ಶುಚಿಯಾಗಿದೆಯೇ ನೋಡಿಕೊಳ್ಳಿ. ಗಲೀಜು ಇರುವ ಸ್ಥಳಗಳಲ್ಲಿ ಟ್ಯಾಟೂ ಹಾಕಿಸಬೇಡಿ. ಟ್ಯಾಟೂ ಹಾಕಿಸಿಕೊಂಡ ಮೇಲೆ ಸುರಕ್ಷತೆಗೆ ಗಮನ ಕೊಡಿ. ಕೊಳಚೆ ನೀರಿನಲ್ಲಿ ಆ ಕೈ ತೊಳೆಯಬೇಡಿ. ಹಾಗಿದ್ದರೂ ತುರಿಕೆ, ಅಲರ್ಜಿಯಂತಹ ಸಮಸ್ಯೆಗಳು ಬಂದರೆ ವೈದ್ಯರನ್ನು ಸಂಪರ್ಕಿಸಿ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ