ಸೀಳು ಕೂದಲಿಗೆ ಬಿಯರ್ ಪರಿಹಾರ!

ಸೋಮವಾರ, 8 ಮೇ 2017 (08:23 IST)
ಬೆಂಗಳೂರು: ಸೀಳು ಕೂದಲಿನ ಸಮಸ್ಯೆಯಿಂದ ಚಿಂತಿತರಾಗಿದ್ದೀರಾ? ಹಾಗಿದ್ದರೆ ಬಿಯರ್ ತರಿಸಿ, ಸಿಂಪಲ್ ರೆಸಿಪಿ ಮಾಡಿ.

 
ನೀರು, ವಾತಾವರಣ, ಅತಿಯಾದ ಬಿಸಿ ನೀರಿನ ಸ್ನಾನ, ಕೂದಲಿಗೆ ಹಚ್ಚುವ ಬಣ್ಣ ಮತ್ತು ಸರಿಯಾದ ಸಮಯಕ್ಕೆ ಕೂದಲು ಕಟ್ ಮಾಡದೇ ಇದ್ದಾಗ ಸೀಳು ಕೂದಲಿನ ಸಮಸ್ಯೆಯಾಗಬಹುದು. ಅದಕ್ಕೆ ಬಿಯರ್ ಬಳಸಿ ಪರಿಹಾರ ಕಂಡುಕೊಳ್ಳಬಹುದು. ಹೇಗೆಂದು ನೋಡಿಕೊಳ್ಳಿ.

ನೊರೆಯುಕ್ತ ಬಿಯರ್ ಬಳಸಬೇಡಿ. ಸಾದಾ ಬಿಯರ್ ಬಳಸಿ. ಶ್ಯಾಂಪೂವಿನಿಂದ ಸ್ನಾನ ಮಾಡಿದ ಮೇಲೆ ಬಿಯರ್ ನಿಂದ ತಲೆ ಮಸಾಜ್ ಮಾಡಿಕೊಳ್ಳಿ. 2-3 ನಿಮಿಷ ಬಿಟ್ಟು ಶುದ್ಧ ನೀರಿನಿಂದ ಕೂದಲು ತೊಳೆದುಕೊಳ್ಳಿ.

ಬಿಯರ್ ಕೂದಲುಗಳಿಗೆ ಸಾಕಷ್ಟು ಪೋಷಕಾಂಶ ಒದಗಿಸಿ, ಸೀಳು ಕೂದಲು ಹಾಗೂ ಕೂದಲಿನ ಇತರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಹಾಗಾಗಿ ಬಿಯರ್ ಕುಡಿಯುವುದರ ಜತೆಗೆ ಕೂದಲುಗಳಿಗೂ ಬಳಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ