ಬೆಂಗಳೂರು: ಮುಖ ಬೆಳ್ಳಗೆ, ಕಾಂತಿಯುತವಾಗಿ ಕಾಣಬೇಕೆಂದು ಹಲವು ಫೇಶಿಯಲ್ ಕ್ರೀಂ ಗಳನ್ನು ಬಳಸುತ್ತೇವೆ. ಆದರೆ ಕೆಲವೊಂದು ಕ್ರೀಮ್ ಗಳಿಂದ ಕೆಲವು ಅಪಾಯಗಳಿವೆ ಎನ್ನುತ್ತಾರೆ ತಜ್ಞರು.
ಬಾಡಿ ಲೋಷನ್
ಮುಖಕ್ಕೆ ಹಚ್ಚಿಕೊಳ್ಳುವ ಫೇಸ್ ಕ್ರೀಂಗಳಿಗಿಂತ ಬಾಡಿ ಲೋಷನ್ ಗಳು ಹೆಚ್ಚು ಸುಗಂಧಭರಿತ ಮತ್ತು ದಪ್ಪವಾಗಿರುತ್ತದೆ. ಹಾಗಂತ ಇದನ್ನು ಮಖಕ್ಕೆ ಹಚ್ಚಬೇಡಿ. ಇದರಿಂದ ಕೆಲವೊಮ್ಮೆ ಅಲರ್ಜಿ ರಿಯಾಕ್ಷನ್ ಆಗುವ ಸಂಭವವಿದೆ.
ಪೆಟ್ರೋಲಿಯಂ ಜೆಲ್
ಚಳಿಗಾಲದಲ್ಲಿ ಒಣ ಚರ್ಮದವರು ಪೆಟ್ರೋಲಿಯಂ ಜೆಲ್ ಹಚ್ಚಿಕೊಳ್ಳುತ್ತಾರೆ. ತುಟಿಗಳಿಗೆ ಹಚ್ಚಿಕೊಳ್ಳುವುದಕ್ಕೆ ಪೆಟ್ರೋಲಿಯಂ ಜೆಲ್ ಸೂಕ್ತ. ಆದರೆ ಚರ್ಮದಲ್ಲಿ ಕೊಳೆ, ದೂಳು ಶೇಖರಣೆಯಾಗಲು ಕಾರಣವಾಗುತ್ತದೆ.
ಫೂಟ್ ಕ್ರೀಂ
ಮುಖಕ್ಕೆ ಹಚ್ಚಿಕೊಳ್ಳುವ ಕ್ರೀಂ ಖಾಲಿಯಾಗಿದೆಯೆಂದು ಫೂಟ್ ಕ್ರೀಂ ಹಚ್ಚಿಕೊಳ್ಳಬೇಡಿ. ಇದು ಕಾಲಿನ ಚರ್ಮಕ್ಕೆ ಮಾತ್ರ ಸೂಕ್ತ. ಈ ಕ್ರೀಂಗಳಲ್ಲಿರುವ ರಾಸಾಯನಿಕ ಮುಖಕ್ಕೆ ಹಾನಿ ಮಾಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ