ಆಲೂ ಕರಿ ಮಾಡುವ ವಿಧಾನ ಇಲ್ಲಿದೆ ನೋಡಿ

ಭಾನುವಾರ, 25 ಫೆಬ್ರವರಿ 2018 (11:12 IST)
ಬೆಂಗಳೂರು : ಅಧಿಕ ಪೋಷ್ಠಿಕಾಂಶದಿಂದ ಕೂಡಿದ್ದ ತರಕಾರಿಯೆಂದರೆ ಆಲೂಗಡ್ಡೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಿಂದ ಮಾಡುವ ಎಲ್ಲಾ ಬಗೆಯ ಅಡುಗೆಗಳು ರುಚಿಯಾಗಿಯೇ ಇರುತ್ತದೆ. ಅದರಲ್ಲಿ ತಯಾರಿಸಬಹುದಾದ ಆಲೂ ಕರಿ ಮಾಡುವ ವಿಧಾನ ಇಲ್ಲಿದೆ.


ಬೇಕಾಗುವ ಪದಾರ್ಥಗಳು:
ತುಪ್ಪ – 1 ಚಮಚ, ಜೀರಿಗೆ – 1 ಚಮಚ, ಪಲಾವ್ ಎಲೆ – 1-2, ಚಕ್ಕೆ – 1, ಏಲಕ್ಕಿ – 2, ಲವಂಗ – 2, ಸೋಂಪು – ಅರ್ಧ ಚಮಚ, ಇಂಗು- ಚಿಟಿಕೆ, ಅರಿಶಿನದ ಪುಡಿ – ಅರ್ಧ ಚಮಚ, ಅಚ್ಚ ಖಾರದ ಪುಡಿ – 1 ಚಮಚ, ದನಿಯಾ ಪುಡಿ – 1 ಚಮಚ, ಕಸೂರಿ ಮೇಥಿ –, ಅರ್ಧ ಚಮಚ, ಶುಂಠಿ ಪೇಸ್ಟ್ – ಅರ್ಧ ಚಮಚ, ಟೊಮೆಟೋ – ಸಣ್ಣಗೆ ಹೆಚ್ಚಿದ್ದು 3, ಆಲೂಗಡ್ಡೆ – 4, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆಹಣ್ಣು – 1


ಮಾಡುವ ವಿಧಾನ:
ಒಲೆಯ ಮೇಲೆ ಬಾಣಲೆಯಿಟ್ಟು ತುಪ್ಪು ಹಾಕಿ ಕಾಯಲು ಬಿಡಬೇಕು. ತುಪ್ಪ ಕಾದ ನಂತರ ಜೀರಿಗೆ, ಪಲಾವ್ ಎಲೆ. ಚಕ್ಕೆ, ಏಲಕ್ಕಿ, ಲವಂಗ, ಸೋಂಪು, ಇಂಗು ಚೆನ್ನಾಗಿ ಉರಿದುಕೊಳ್ಳಬೇಕು.
ನಂತರ ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ. ಕಸೂರಿ ಮೇಥಿ. ಶುಂಠಿ ಪೇಸ್ಟ್, ಟೊಮೆಟೋ ಹಾಕಿ ಚೆನ್ನಾಗಿ ಉರಿದುಕೊಳ್ಳಬೇಕು. ತಟ್ಟೆಯನ್ನು ಮುಚ್ಚಿ 3-5 ನಿಮಿಷ ಬೇಯಿಸಿ, ಟೊಮೆಟೋ ಪೇಸ್ಟ್ ರೀತಿ ಆದ ಬಳಿಕ ಬೇಯಿಸಿ ಕತ್ತರಿಸಿದ ಆಲೂಗಡ್ಡೆ, ಉಪ್ಪು, 1 ಬಟ್ಟಲು ನೀರು ಹಾಕಿ 5-10 ನಿಮಿಷ ಕುದಿಯಲು ಬಿಡಬೇಕು.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಅರ್ಧ ನಿಂಬೆಹಣ್ಣಿನ ರಸ, ಕಸೂರಿ ಮೇಥಿ ಹಾಕಿ ಅಲಂಕರಿಸಿದರೆ ರುಚಿಕರವಾದ ಆಲೂ ಕರಿ ಸವಿಯಲು ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ