ಬೇಬಿ ಪ್ರಾಡಕ್ಟ್ ಬಳಸಿ ಸೌಂದರ್ಯ ಹೆಚ್ಚಿಸಿ

ಮಂಗಳವಾರ, 9 ಮೇ 2017 (08:48 IST)
ಬೆಂಗಳೂರು: ಮಗುವಿಗೆ ಬಳಸುವ ಸೌಂದರ್ಯ ವರ್ಧಕಗಳೂ ನಮ್ಮ ಸೌಂದರ್ಯ ವರ್ಧಕಗಳಾಗಬಹುದು. ಅದು ಹೇಗೆ? ನೋಡಿಕೊಳ್ಳಿ.


ಬೇಬಿ ಪೌಡರ್
ಡ್ರೈ ಶ್ಯಾಂಪೂ ಖಾಲಿಯಾಗಿದ್ದಾಗ ಬೇಬಿ ಪೌಡರ್ ಬಳಸಿ ಕೂದಲ ಬುಡಕ್ಕೆ ಹಾಕಿ ಉಜ್ಜಿಕೊಳ್ಳಿ. ಇದು ಒದ್ದೆ ಕೂದಲನ್ನು ಒಣಗಿಸಿ ಕೇಶ ರಾಶಿಗೆ ಹೊಸ ಹೊಳಪು ನೀಡುತ್ತದೆ.

ಬೇಬಿ ಆಯಿಲ್
ಬೇಬಿ ಆಯಿಲ್ ಬಳಸುವುದರಿಂದ ಚರ್ಮ ಮೃದುವಾಗುತ್ತದೆ. ಇದನ್ನು ಮೇಕಪ್ ತೆಗೆಯಲು ಮತ್ತು ಚರ್ಮದ ತೇವಾಂಶ ಉಳಿಸಲು ಹಾಗೂ ಮಸಾಜ್ ಮಾಡಲು ಬಳಸಬಹುದು.

ಬೇಬಿ ಕ್ರೀಂ
ಡಯಾಪರ್ ಬಳಸಿ ಮಗುವಿನ ಚರ್ಮ ಕೆಂಪಾದರೆ ಬೇಬಿ ಕ್ರೀಂ ಬಳಸುತ್ತಾರೆ. ಅದನ್ನೇ ನಮಗೂ ಮಾಡಬಹುದು. ಬೇಸಿಗೆಯಲ್ಲಿ ಚರ್ಮ ಕೆಂಪಗಾಗಿ ಗುಳ್ಳೆಗಳಾಗುವುದಕ್ಕೆ ಬೇಬಿ ಕ್ರೀಂ ಬಳಸಬಹುದು.

ಬೇಬಿ ಶ್ಯಾಂಪು
ಬೇಬಿ ಶ್ಯಾಂಪು ಬಳಸಿ ಸೀಳು ಕೂದಲಿನಿಂದ ಮುಕ್ತಿ ಹೊಂದಬಹುದು. ಪ್ರತಿ ದಿನ ತಲೆ ಸ್ನಾನ ಮಾಡುವವರಾದರೆ, ಕೂದಲಿಗೆ ಹೆಚ್ಚು ಹಾನಿಯಾಗದಂತೆ ನೋಡಿಕೊಳ್ಳುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ