ಉಗುರಿನ ಸಂರಕ್ಷಣೆ-ಸುಂದರ ಉಗುರಿನ ಒಡೆಯರಾಗಬೇಕೇ?

ಸೋಮವಾರ, 21 ಏಪ್ರಿಲ್ 2014 (12:25 IST)
ಸಾಮಾನ್ಯವಾಗಿ ಪೆಡಿಕ್ಯೂರ್ ಮತ್ತು ಮ್ಯಾನಿಕುರ್ ಮಾಡಿಕೊಳ್ಳುವುದರಿಂದ ನಾವು ಉಗುರಿನ 
 
ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ. ಆದರೆ ಅದನ್ನು ಹೊರತು ಪಡಿಸಿಯೂ ನೀವು ಗಮನ 
 
ಕೊಟ್ಟು ಮಾಡಿಕೊಳ್ಳುವ ಅನೇಕ ಉಪಚಾರಗಳು ಉಗುರಿನ ರಕ್ಷಣೆ ಮಾಡುತ್ತದೆ. 
 
ಕೆಳಗೆ ನೀಡಿರುವ ಅಂಶಗಳತ್ತ ಗಮನ ನೀಡಿದರೆ ಸುಂದರ ಉಗುರಿನ ಒಡೆಯರಾಗುತ್ತೀರಿ 
 
ನಿಸ್ಸಂಶಯವಾಗಿ. ಮಾಡ ಬೇಕಾಗಿರುವುದು: ನೀವು ನೈಲ್ ಪಾಲಿಶ್ ತೆಗೆದ ಬಳಿಕ ತಪ್ಪದೆ ಕೈ ಮತ್ತು 
 
ಉಗುರಿಗೆ ಮಾಯಿಶ್ಚರೈಸರ್ ಕ್ರೀಮ್ ಲೇಪಿಸಿ ನಿಮ್ಮ ಕೈಗಳನ್ನು ನಿಧಾನವಾಗಿ ಸೋಪಿನಿಂದ ಉಜ್ಜಿ 
 
ತೊಳೆಯಿರಿ.
 
 
ಒಂದು ಸರಳ ಪ್ಯಾಕ್ ಹಾಕಿರಿ. ಈ ಪ್ರಕ್ರಿಯೆಯಿಂದ ಚರ್ಮದಲ್ಲಿ ಅಡಗಿರುವ ಸತ್ತ ಕಣಗಳು ಹೊರ ಬಂದು 
 
ಚರ್ಮವು ತಾಜವಾಗುತ್ತದೆ.
ನೀವು ಆರೈಕೆ ಮಾಡಿಸಿಕೊಳ್ಳುವ ಸೆಲೂನ್ ಶುಚಿಯಾಗಿದ್ದಾರೆ ಮಾತ್ರ ಅವರ ಸೇವೆ ಪಡೆಯಿರಿ.. ಇದು 
 
ನಿಮ್ಮ ಉಗುರಿನ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. 
 
ನೀವು ಹೆಚ್ಚು ಬಾರಿ ಪೆಡಿಕ್ಯೂರ್ ಮತ್ತು ಮ್ಯಾನಿಕ್ಯೂರ್ ಮಾಡಿಕೊಳ್ಳುತ್ತಿದ್ದರೆ ನಿಮ್ಮದೇ ಸ್ವಂತ 
 
ಪೆಡಿಕ್ಯೂರ್ -ಮ್ಯಾನಿಕ್ಯೂರ್ ಸೆಟ್ ಮನೆಯಲ್ಲಿ ತಂದಿಟ್ಟು ಕೊಂಡು ಬಳಸುವುದು ಎಲ್ಲ ರೀತಿಯಿಂದಲೂ 
 
ಸೂಕ್ತ. ನೀವು ಬಳಸುವ ಉಪಕರಣಗಳು ಸ್ವಚ್ಛವಾಗಿರುವಂತೆ ನೋಡಿ ಕೊಳ್ಳಿ 
ನೀವು ಉಗುರುಗಳಿಗೆ ಬಳಸುವ ಪಾಲೀಶ್ 3 ರಿಂದ 5 ಕ್ಕಿಂತ ಹೆಚ್ಚು ಲೇಪಿಸದಿರಿ .. ಅತಿಯಾಗಿ 
 
ಹಚ್ಚಿದರೆ ಒಣಗುವುದು ತುಂಬಾ ತಡವಾಗುತ್ತದೆ. 

ವೆಬ್ದುನಿಯಾವನ್ನು ಓದಿ