ಕಣ್ಣುಗಳನ್ನು ಉಷ್ಣದಿಂದ ಕಾಪಾಡಲು ಹೀಗೆ ಮಾಡಿ..

ಗುರುವಾರ, 11 ಅಕ್ಟೋಬರ್ 2018 (15:11 IST)
ಕಣ್ಣಿನ ಸುತ್ತಲಿನ ಕಪ್ಪು ವರ್ತುಲ, ಉರಿಯೂತ, ಕಣ್ಣುರಿ, ಕಣ್ಣು ಕೆಂಪಗಾಗುವುದು, ಕಣ್ಣಿನ ಗುಳಿಬೀಳುವಿಕೆ ಹೀಗೆ ಹಲವು ಸಮಸ್ಯೆಗಳು ನಮ್ಮ ಕಣ್ಣುಗಳ ಸೌಂದರ್ಯವನ್ನು ಹಾಳುಮಾಡುತ್ತವೆ. ಪ್ರತಿಯೊಬ್ಬರೂ ಸುಂದರವಾದ ಮತ್ತು ಆರೋಗ್ಯವಾದ ಕಣ್ಣುಗಳನ್ನು ಹೊಂದಲು ಇಷ್ಟಪಡುತ್ತಾರೆ. ಅದಕ್ಕಾಗಿ ನಮ್ಮ ಕಣ್ಣುಗಳು ತಂಪಾಗಿರುವಂತೆ ಮಾಡಿದರೆ ನಮ್ಮ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಆದ್ದರಿಂದ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ನಿಮ್ಮ ಕಣ್ಣುಗಳನ್ನು ತಂಪಾಗಿರಿಸಿಕೊಳ್ಳಿ.
*ತಂಪಾದ ಟೀ ಬ್ಯಾಗ್‌ಗಳನ್ನು 5 ನಿಮಿಷ ಮುಚ್ಚಿದ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಇದು ಕಣ್ಣಿನ ಕೆಳಗಿನ ಕಪ್ಪು ವರ್ತುಲವನ್ನೂ ಸಹ ಹೋಗಲಾಡಿಸುತ್ತದೆ.
 
*ತಂಪಾದ ನೀರಿನಲ್ಲಿ ಹತ್ತಿ ಉಂಡೆಗಳನ್ನು ಅದ್ದಿ ಅದನ್ನು ಮುಚ್ಚಿದ ಕಣ್ಣುಗಳ ಮೇಲೆ 10-15 ನಿಮಿಷ ಇರಿಸಿಕೊಳ್ಳಿ.
 
*ದಣಿದ ಕಣ್ಣುಗಳಿಗೆ ಸೌತೆಕಾಯಿಗಳು ಉತ್ತಮವಾಗಿದೆ. ಅದರ ಎರಡು ತುಂಡುಗಳನ್ನು ಕಣ್ಣುಗಳ ಮೇಲೆ ಇರಿಸಿಕೊಂಡು ಸ್ವಲ್ಪ ಸಮಯ ವಿರಾಮಿಸಬೇಕು. ಅದರಿಂದ ಕಣ್ಣುಗಳು ತಂಪಾಗಿಸುವುದರೊಂದಿಗೆ ಕಪ್ಪು ವರ್ತುಲವನ್ನೂ ಸಹ ತಿಳಿಯಾಗಿಸುತ್ತದೆ. ಸೌತೆಕಾಯಿ ತುಂಡುಗಳ ಬದಲಾಗಿ ನೀವು ಅದರ ರಸವನ್ನು ಬೇರ್ಪಡಿಸಿ ಅದರಲ್ಲಿ ಹತ್ತಿ ಉಂಡೆಗಳನ್ನು ಅದ್ದಿ ಸಹ ಬಳಸಬಹುದಾಗಿದೆ.
 
*ಹತ್ತಿಯ ಉಂಡೆಗಳನ್ನು ರೋಸ್ ವಾಟರ್‌ನಲ್ಲಿ ಅದ್ದಿ ಅದನ್ನು ನಿಮ್ಮ ಕಣ್ಣುಗಳ ಮೇಲೆ 10-15 ನಿಮಿಷಗಳು ಇರಿಸಿಕೊಳ್ಳಿ.
 
*ಆಲೂಗಡ್ಡೆಯ ತುಂಡುಗಳನ್ನು 10-15 ನಿಮಿಷಗಳು ನಿಮ್ಮ ಕಣ್ಣುಗಳ ಮೇಲೆ ಇರಿಸಿಕೊಳ್ಳಿ ಅಥವಾ ಹಸಿ ಆಲೂಗಡ್ಡೆಯ ರಸವನ್ನು ನಿಮ್ಮ ಕಣ್ಣುಗಳ ಸುತ್ತ ಹಚ್ಚಿಕೊಳ್ಳಿ. ಇದು ಕಣ್ಣಿಗಳು ಗುಳಿಬೀಳುವ ಮತ್ತು ವರ್ತುಲ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.
 
*ಅಲೋವೆರಾ ಎಲೆಯನ್ನು ತುಂಡನ್ನು ಸೀಳಿ ಅದನ್ನು 5 ನಿಮಿಷ ನಿಮ್ಮ ಮುಚ್ಚಿದ ಕಣ್ಣುಗಳ ಮೇಲೆ ಇರಿಸಿಕೊಳ್ಳಿ.
 
*ನಿಮ್ಮ ಕಣ್ಣುಗಳ ಉಷ್ಣವನ್ನು ಕಡಿಮೆ ಮಾಡಲು ನೀವು ಕಲ್ಲಂಡಿ ಹಣ್ಣು ಅಥವಾ ಸ್ಟ್ರಾಬೆರ್ರಿಯ ತುಂಡುಗಳನ್ನು 5-10 ನಿಮಿಷ ನಿಮ್ಮ ಕಣ್ಣುಗಳ ಮೇಲೆ ಇರಿಸಿಕೊಳ್ಳಿ.
 
*ಈ ದಿನಗಳಲ್ಲಿ ಕಣ್ಣುಗಳಿಗಾಗಿ ಹಲವಾರು ಕೂಲಿಂಗ್ ಮಾಸ್ಕ್‌ಗಳು ಲಭ್ಯವಿವೆ. ಜೆಲ್ ಮಾಸ್ಕ್‌ಗಳು ಸಾಮಾನ್ಯವಾಗಿವೆ, ನೀವು ಅವುಗಳನ್ನು ಫ್ರಿಡ್ಜ್‌ನಲ್ಲಿಟ್ಟು ತಂಪು ಮಾಡಿ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಬೇಕು ಅಷ್ಟೇ. ನಿಮಗೆ ಮಾರುಕಟ್ಟೆಗಳಲ್ಲಿ ಸಿಗುವ ಮಾಸ್ಕ್‌ಗಳನ್ನು ಬಳಸಲು ಇಷ್ಟವಿಲ್ಲದಿದ್ದರೆ ನೀವು ಮನೆಯಲ್ಲಿಯೇ ಸರಳವಾಗಿ ಐಸ್ ಪ್ಯಾಕ್‌ಗಳನ್ನು ತಯಾರಿಸಿಕೊಳ್ಳಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ