ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

Krishnaveni K

ಸೋಮವಾರ, 2 ಮಾರ್ಚ್ 2026 (14:20 IST)
ಮಗು ಹುಟ್ಟಿದ ಆರು ತಿಂಗಳವರೆಗೆ ಸರಿಯಾದ ಸಮಯಕ್ಕೆ ನಿದ್ರಿಸಲ್ಲ, ಅಮ್ಮಂದಿರಿಗೂ ವಿಶ್ರಾಂತಿ ಇಲ್ಲದ ಪರಿಸ್ಥಿತಿಯಾಗಿರುತ್ತದೆ. ಹೀಗಾಗಿ ನವಜಾತ ಶಿಶುಗಳು ಹೆಚ್ಚು ಹೊತ್ತು ನಿದ್ರಿಸಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

ನವಜಾತ ಮಕ್ಕಳಿಗೆ ಹಗಲು ಮತ್ತು ರಾತ್ರಿಯ ವ್ಯತ್ಯಾಸವಿರುವುದಿಲ್ಲ. ಅವರು ಹೆಚ್ಚು ಹೊತ್ತು ನಿದ್ರಿಸಿದಷ್ಟೂ ಅವರ ಬೆಳವಣಿಗೆಯಾಗುತ್ತದೆ. ಹಾಗಿದ್ದರೂ ರಾತ್ರಿ ಹೊತ್ತು ನಿದ್ರಿಸಿದರೆ ನಮಗೂ ವಿಶ್ರಾಂತಿ ಸಿಗುತ್ತದೆ. ಇದಕ್ಕಾಗಿ ಇದೊಂದು ಸಿಂಪಲ್ ಕೆಲಸ ಮಾಡಿ.

ಹಗಲು ಹೊತ್ತು ಮನೆಯಲ್ಲಿ ಶುಭ್ರ ಬೆಳಕು ಇರುವಂತೆ ಕಿಟಿಕಿ, ಬಾಗಿಲುಗಳನ್ನು ತೆರೆದಿಡಿ. ಅವರನ್ನು ಮಾತನಾಡಿಸುತ್ತಾ, ಅವರ ಜೊತೆ ಆಟವಾಡುತ್ತಾ ಅವರನ್ನು ಎಂಗೇಜ್ ಆಗಿರುವಂತೆ ನೋಡಿಕೊಳ್ಳಿ. ರಾತ್ರಿ ಮನೆಯಲ್ಲಿ ಮಬ್ಬು ಬೆಳಕು ಇರುವಂತೆ ನೋಡಿಕೊಳ್ಳಿ ಮತ್ತು ಹೆಚ್ಚು ಸದ್ದುಗದ್ದಲ ಮಾಡಬೇಡಿ. ಇನ್ನು ಮಧ್ಯರಾತ್ರಿ ಅವರು ಒದ್ದೆ ಮಾಡಿಕೊಂಡಿದ್ದರೆ ಬಟ್ಟೆ ಬದಲಾಯಿಸುವುದಿದ್ದರೂ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಮತ್ತು ಮಾತನಾಡುವುದು ಮಾಡಬೇಡಿ. ಅದೇ ರೀತಿ ಸ್ನಾನ ಮಾಡಿಸುವಾಗ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ. ಇದರಿಂದ ಮಗು ಸುಖವಾಗಿ ನಿದ್ರಿಸುತ್ತದೆ. ಸಂಜೆ ಹೊತ್ತು 3 ರಿಂದ ನಾಲ್ಕು ಗಂಟೆಗಳಷ್ಟು ಸಮಯ ಪ್ರತೀ ಒಂದು ಗಂಟೆಗೊಮ್ಮೆ ಹಾಲು ಕುಡಿಸಿ. ಇದರಿಂದ ರಾತ್ರಿ ಅವು ಹಸಿವಿನಿಂದ ಆಗಾಗ ಏಳುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ