ಉದ್ದ ಕೂದಲು ಪಡೆಯಲು ಹೀಗೆ ಮಾಡಿ

ಸೋಮವಾರ, 9 ಮೇ 2016 (19:07 IST)
ಕೆಲವರಿಗೆ ಉದ್ದ ಕೂದಲು ಬೆಳೆಸಿಕೊಳ್ಳಬೇಕೆಂಬ ಬಯಕೆ ಇರುತ್ತೆ. ಆದರೆ ತಮ್ಮ ಈ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲಾಗದೆ ಒದ್ದಾಡುತ್ತಾರೆ. ನಿಮಗೂ ಉದ್ದ ಕೂದಲು ಬೆಳೆಸಿಕೊಳ್ಳಬೇಕೆಂಬ ಆಸೆ ಇದೆಯೇ? ಹೀಗೆ ಮಾಡಿ.


 
1. ದಿನಕ್ಕೆ ಎರಡು - ಮೂರು ಬಾರಿ ಕೂದಲನ್ನು  ಬಾಚಿ.
 
2. ಕೂದಲನ್ನು ಬಾಚುವುದರಿಂದ ತಲೆಗೆ ಮಸಾಜ್ ದೊರೆತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುವುದು. 
 
3. ಕೆಲವರು ತಲೆಗೆ ಎಣ್ಣೆಯನ್ನೇ ಹಚ್ಚುವುದಿಲ್ಲ. ಇದು ನಿಜಕ್ಕೂ ಕೂದಲಿನ ಆರೋಗ್ಯಕ್ಕೆ ಕಂಟಕ. ವಾರಕ್ಕೆ 3-4 ಬಾರಿಯಾದರೂ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ. ರಾತ್ರಿ ಎಣ್ಣೆ ಹಾಕಿ ಮಸಾಜ್ ಮಾಡಿ ಬೆಳಿಗ್ಗೆ ಸ್ನಾನ ಮಾಡುವುದು ಉತ್ತಮ.
 
4.ಮಲಗುವಾಗ ಕೂದಲನ್ನು ಬಿಟ್ಟುಕೊಂಡು ಮಲಗಬೇಡಿ. ಇದರಿಂದ ಕೂದಲು ಸಿಕ್ಕಾಗುತ್ತದೆ. ಮಲಗುವ ಮುನ್ನ ಸಡಿಲವಾದ ಜಡೆ ಹಾಕಿ ಕೂದಲನ್ನು ಕಟ್ಟಿ, 
 
5. ದಾಸವಾಳವನ್ನು ಎಣ್ಣೆಗೆ ಹಾಕಿ ಕುದಿಸಿ, ಕೂದಲಿಗೆ ಹಚ್ಚಿ.
 
6. ಬಾದಾಮಿ ಎಣ್ಣೆ, ನೆಲ್ಲಿಕಾಯಿ ಎಣ್ಣೆ ಕೂದಲು ಬೆಳೆಯಲು ಸಹಕಾರಿ .
 
7. ಅತಿ ಬಿಸಿ ನೀರಿನಿಂದ ಕೂದಲು ತೊಳೆಯಬೇಡಿ. ಉಗುರು ಬೆಚ್ಚಗಿನ ಅಥವಾ ತಣ್ಣಗಿನ ನೀರಿನಿಂದ ಕೂದಲು ತೊಳೆಯಿರಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ