ಬೇಸಿಗೆಗೆ ಪ್ರಿಯಾಂಕಾ ಚೋಪ್ರಾ ರೀತಿ ಪರ್ಫೆಕ್ಟ್ ಯಲ್ಲೋ ಐ ಶಾಡೋ ಟ್ರೈ ಮಾಡಿ

ಸೋಮವಾರ, 1 ಮೇ 2017 (19:13 IST)
ಮುಂಬೈ:ಮೇಕಪ್ ವಿಷಯಕ್ಕೆ ಬಂದಾಗ ಮಹಿಳೆಯರು ಹೆಚ್ಚು ಜಾಗರೂಕತೆಯನ್ನು, ಆಸಕ್ತಿಯನ್ನು ಹೊಂದಿರುತ್ತಾರೆ. ಅದರಲ್ಲೂ ಕಣ್ಣಿನ ಮೇಕಪ್ ವಿಷಯಕ್ಕೆ ಬಂದಾಗ ಇನ್ನಷ್ಟು ಮುತುವರ್ಜಿಯಿಂದ ಅಲಂಕರಿಸಿಕೊಳ್ಳುವುದು ಸ್ವಾಭಾವಿಕ.  ಇಂತಹ ಒಂದು ವಿಶೇಷವಾದ ಹಾಗೂ ಬೇಸಿಗೆಯಲ್ಲಿ ಮಾಡಿಕೊಳ್ಳಬಹುದಾದ ಯಲ್ಲೋ ಐ ಶಾಡೋ ಮೇಕಪ್ ಬಗ್ಗೆ ಇಲ್ಲಿ ತಿಳಿಸಲಾಗಿದೆ.
 

ಕಣ್ಣಿನ ಮೇಕಪ್ ವಿಷಯಕ್ಕೆ ಬಂದಾಗ ಯಲ್ಲೋ ಐ ಶಾಡೋ ತುಂಬಾ ಪ್ರಯೋಗಾತ್ಮಕವಾಗಿ ಹಾಗೂ ಇಂಟರೆಸ್ಟಿಂಗ್ ಆಗಿ ಕಾಣುತ್ತದೆ. ಇದೇನಿದು ಯಲ್ಲೋ ಐ ಶಾಡೋನಾ... ಕ್ರೇಜಿ.. ಅಂದ್ಕೊಬೇಡಿ. ಇದು ಈ ಸಮ್ಮರ್ ನಲ್ಲಿ ಪರ್ಫೆಕ್ಟ್ ಆಯ್ಕೆ. 

ಬಾಲಿವುಡ್ ನಟಿ ಪ್ರಿಯಾಂಕ್ ಚೋಪ್ರಾ ಈ ಯಲ್ಲೋ ಐ ಶಾಡೋ ನ ಅಭಿಮಾನಿ. ಕಳೆದ ಕೆಲ ದಿನಗಳಿಂದ ಪ್ರಿಯಾಂಕಾ ತಮ್ಮ ವಿಭಿನ್ನವಾದ ಬಟ್ಟೆಗಳು, ವಿಶೇಷವಾದ ಮೇಕ್ ಗಳಿಂದ ಎಲ್ಲರ ಗಮನಸೆಳೆಯುತ್ತಿದ್ದಾರೆ.

ಅವರ ಬ್ಲ್ಯಾಕ್ ಜಾಕೆಟ್ ನ ಪಿಂಕ್ ಜಂಪ್ಸ್ ಸೂಟ್ ಗಳಲ್ಲಿ ಈ ವಿಶೇಷವಾದ ಮೇಕಪ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಈ ಮೇಕಪ್ ಎಲ್ಲರ ಸ್ಕಿನ್ ಟೋನ್ ಗೂ ಸೂಟೆಬಲ್ ಆಗಿದ್ದು ಆಕರ್ಷಕವಾಗಿ ಕಾಣುತ್ತದೆ.

ಈ ವಿಭಿನ್ನ ಮೇಕಪ್ ನಲ್ಲಿ ಕೆಲ ನೆನಪಿನಲ್ಲಿಡಬೇಕಾದ ಅಂಶವೆಂದರೆ ನೀವು ಈ ಯಲ್ಲೋ ಐ ಶಾಡೋದಲ್ಲಿ ಆಕರ್ಷಕವಾಗಿ ಕಾಣಲು ವೈಟ್ ಶಾಡೋಥರದಲ್ಲಿ ಮೇಕಪ್ ಮಾಡಿಕೊಂಡು ಕನ್ಸಲರ್ ನ್ನು ಬಳಸುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣಬಹುದು. 

ಒಂದು ವೇಳೆ ಯಲ್ಲೋ ಐ ಶಾಡೋ ನಿಮ್ಮ ಕಣ್ಣುಗಳು ಡಲ್ ಆಗಿ ಕಾಣುವಂತೆ ಮಾಡಿದಲ್ಲಿ ಬ್ಲ್ಯಾಕ್ ಲೈನರ್ ಹಾಗೂ ಮಸ್ಕರಾ ದಿಂದ ನಿಮ್ಮ ಮೇಕಪ್ ನ್ನು ಪೂರ್ಣಗೊಳಿಸಿ. ಆಗ ನಿಮ್ಮ ಕಣ್ಣುಗಳು ಹೆಚ್ಚು ಕಾಂತಿಯುತವಾಗಿ, ಆಕರ್ಷಣೀಯವಾಗಿ ಭಾಸವಾಗುತ್ತದೆ.

ಇನ್ನೂ ನೀವು ಗ್ಲ್ಯಾಮ್ ಅಪ್ ಆಗಿ ಕಾಣಬೇಕೆಂದರೆ ಯಲ್ಲೋ ಶಾಡೋ ಮೇಲೆ ಕೊಂಚ ಗೋಲ್ಡ್ ಶಾಡೋ ಲೇಯರ್ ನ್ನು ಉಪಯೋಗಿಸಬಹುದು. 

ವೆಬ್ದುನಿಯಾವನ್ನು ಓದಿ