ಕೂದಲು ಸೊಂಪಾಗಿ ಬೆಳೆಯಲು ಇವುಗಳನ್ನು ಟ್ರೈ ಮಾಡಿ

ಸೋಮವಾರ, 15 ಮೇ 2017 (08:13 IST)
ಬೆಂಗಳೂರು: ನೀರಿನ ಸಮಸ್ಯೆಯೋ, ವಾತಾವರಣದ ಗುಣವೋ, ಕೂದಲು ಉದುರುವಿಕೆ ಸಮಸ್ಯೆ ಕಾಡುತ್ತಿರಬಹುದು. ಹಾಗಾದೆ ಸೊಂಪಾಗಿ ಕೂದಲು ಬೆಳೆಯಲು ಏನು ಮಾಡಬೇಕು ಎನ್ನುವವರಿಗೆ ಇಲ್ಲಿದೆ ಕೆಲವು ಸಮಸ್ಯೆಗಳು.

 
ಮೊಟ್ಟೆ
ಮೊಟ್ಟೆಯಲ್ಲಿರುವ ಪೋಷಕಾಂಶಗಳು ನಿಮ್ಮ ಕೂದಲಿಗಾಗುವ ಹಾನಿಯನ್ನು ಆದಷ್ಟು ಕಡಿಮೆ ಮಾಡುತ್ತದೆ. ಒಣ ಕೂದಲಿಗೆ ಮೊಟ್ಟೆಯ ಒಳಭಾಗವನ್ನು ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ತೊಳೆದುಕೊಳ್ಳಿ. ಹೀಗೇ ಮಾಡುತ್ತಿದ್ದರೆ ಕೂದಲು ಹೆಚ್ಚು ಸೊಂಪಾಗಿ ಬೆಳೆಯಬಹುದು.

ತೆಂಗಿನ ಎಣ್ಣೆ
ಕೂದಲು ಕಪ್ಪು ಮತ್ತು ದಟ್ಟವಾಗಿ ಬೆಳೆಯಲು ತೆಂಗಿನ ಎಣ್ಣೆಗಿಂತ ದೊಡ್ಡ ಮದ್ದಿಲ್ಲ. ತೆಂಗಿನ ಎಣ್ಣೆಯನ್ನು ಹಚ್ಚಿಕೊಂಡು ಕೂದಲು ಮಸಾಜ್ ಮಾಡುವುದರಿಂದ ಸೀಳು ಕೂದಲು ಮತ್ತು ತಲೆಹೊಟ್ಟಿನಂತಹ ಸಮಸ್ಯೆಯಿಂದಲೂ ಪಾರಾಗಬಹುದು.

ದಾಸವಾಳ
ದಾಸವಾಳದ ಗಿಡ ಹಿತ್ತಿಲಿನಲ್ಲಿದ್ದರೆ ಕೂದಲಿನ ಎಲ್ಲಾ ಸಮಸ್ಯೆಗೂ ಅದುವೇ ಪರಿಹಾರ. ದಾಸವಾಳದ ಹೂವಿನ ಎಣ್ಣೆ ತಯಾರಿಸಿಕೊಂಡು ಕೂದಲಿಗೆ ಮಸಾಜ್ ಮಾಡಿಕೊಳ್ಳಬಹುದು. ಅಲ್ಲದೆ ದಾಸವಾಳದ ಕಾಂಡದ ಹೊರ ಪದರವನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟಾಗ ಅಂಟಿನಂತಹ ಪದಾರ್ಥವಾಗುವುದು. ಇದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದು ತಲೆಗೆ ತಂಪು ಮತ್ತು ಕೂದಲಿಗೂ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ