ಕಾಫಿ ಕುಡಿಯಲು ಮಾತ್ರವಲ್ಲ, ತ್ವಚೆಯನ್ನು ಪೋಷಿಸಿ ಸೌಂದರ್ಯವನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ. ಕಾಫಿ ಪುಡಿ ಬಳಕೆಯಿಂದ ಮುಖಕ್ಕೆ, ದೇಹದ ಚರ್ಮಕ್ಕೆ ಮತ್ತು ಕೂದಲಿಗೆ ಅಗತ್ಯ ಪೋಷಣೆ ನೀಡುತ್ತದೆ.
ವಾಸ್ತವವಾಗಿ ಕಾಫಿಯ ಕೆಫೀನ್ ದೇಹದೊಳಕ್ಕೆ ಮಾಡುವ ಉಪಕಾರಕ್ಕಿಂತಲೂ ದೇಹದ ಹೊರಗಿನಿಂದ ನೀಡುವ ಪೋಷಣೆಯೇ ಹೆಚ್ಚು ಉಪಯುಕ್ತವಾಗಿದೆ. ಹೌದು ನಿಮ್ಮ ತ್ವಚೆ ಮತ್ತು ಕೂದಲಿಗೂ ಕಾಫಿ ಹೆಚ್ಚು ಒಳ್ಳೆಯದು. ಕಾಫಿಯಲ್ಲಿರುವ ಕೆಫಿನ್ ಅಂಶವು ತ್ವಚೆ ಮತ್ತು ಕೂದಲನ್ನು ರಿಪೇರಿ ಮಾಡಲು ಸಹಾಯ ಮಾಡುತ್ತದೆ. ಕಾಫಿಯಲ್ಲಿರುವ ಉತ್ಕರ್ಷಣ ಅಂಶಗಳು ಮುಖದ ಕಾಂತಿಯನ್ನು ದ್ವಿಗುಣಗೊಳಿಸುವಲ್ಲಿ ಸಹಕಾರಿ.
- ಚರ್ಮದ ಕಾಂತಿ ಹೆಚ್ಚಿಸುತ್ತದೆ
ಕಾಫಿಪುಡಿಯನ್ನು ನೀರಿನೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಇದೊಂದು ಉತ್ತಮವಾದ ಫೇಸ್ ಪ್ಯಾಕ್ ಆಗಿದೆ.
- ಕಪ್ಪು ವರ್ತುಲಗಳನ್ನು ನಿವಾರಿಸುತ್ತದೆ
ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ನಿವಾರಿಸುವಲ್ಲಿ ಕಾಫಿ ಸಹಾಯಕವಾಗಿದೆ. ಕಣ್ಣಿನ ಆಯಾಸವನ್ನು ದೂರಮಾಡಿ ಕಣ್ಣಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ. ನೀರನ್ನು ಬೆರೆಸಿ ಕಾಫಿ ಹುಡಿಯನ್ನು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕಣ್ಣಿನ ಅಡಿಭಾಗಕ್ಕೆ ಹಚ್ಚಿರಿ ಮತ್ತು ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಿ.
- ಸ್ಕ್ರಬ್
ಅತ್ಯುತ್ತಮ ಸ್ಕ್ರಬ್ ಆಗಿ ಕಾಫಿ ಕಾರ್ಯನಿರ್ವಹಿಸುತ್ತಿದ್ದು ತ್ವಚೆಯನ್ನು ಎಕ್ಸ್ಫೋಲಿಯೇಟ್ ಮಾಡುತ್ತದೆ. ಸೆಲ್ಯುಲೈಟ್ ಅನ್ನು ಕಡಿಮೆ ಮಾಡಿ ಮುಖದ ಸ್ವಚ್ಛತೆಯನ್ನು ಮಾಡುತ್ತದೆ. ಕಾಫಿ ಹುಡಿಯೊಂದಿಗೆ ಆಲೀವ್ ಎಣ್ಣೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಸ್ಕ್ರಬ್ನಂತೆ ಮಸಾಡ್ ಮಾಡಿ.
- ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ
ಕೂದಲಿನ ಬುಡದ ಚರ್ಮಕ್ಕೆ ಬೇಕಾದ ಅನೇಕ ಅಂಶ ಕಾಫಿಯಲ್ಲಿದೆ. ಕಾಫಿ ಕೂದಲಿಗೂ ತುಂಬಾ ಒಳ್ಳೆಯದು. ಕಾಫಿ ನೈಸರ್ಗಿಕ ಕಂಡೀಶನರ್ ನಂತೆ ಕೆಲಸ ನಿರ್ವಹಿಸಿ ಕೂದಲುದುರುವಿಕೆ ತಡೆದು ಮೃದುವಾಗಿಸುತ್ತೆ. ಕಾಫಿಪುಡಿಯನ್ನು ಕೂದಲ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ಕೂದಲ ಬೆಳವಣೆಗೆ ಹೆಚ್ಚುತ್ತದೆ.
- ತ್ವಚೆಯನ್ನು ಬೆಳ್ಳಗಾಗಿಸುತ್ತದೆ
ತ್ವಚೆಯನ್ನು ಬೆಳ್ಳಗಾಗಿಸುವ ಅಂಶ ಕಾಫಿಯಲ್ಲಿದೆ. ಮುಖದ ಕಾಂತಿ ವರ್ಧಕ ಫೇಶಿಯಲ್ ಆಗಿ ಕಾಫಿಯನ್ನು ಬಳಸಲಾಗುತ್ತದೆ. ರಕ್ತ ಸಂಚಾರವನ್ನು ಹೆಚ್ಚಿಸಿ ಸೆಲ್ಯುಲಾಟ್ ಅನ್ನು ಕಡಿಮೆ ಮಾಡುತ್ತದೆ. ತ್ವಚೆಯನ್ನು ಪುನಶ್ಚೇತನಗೊಳಿಸಿ ಕಾಂತಿಯುತವಾಗಿಸುತ್ತದೆ.
- ಕಾಫಿ ಮೆನಿಕ್ಯೂರ್ ಮತ್ತು ಪೆಡಿಕ್ಯೂರ್
ಒಡೆದ ಹಿಮ್ಮಡಿ ಮತ್ತು ಕಪ್ಪಾದ ಮೊಣಕೈ ಮೊಣಕಾಲಿಗೂ ಕಾಫಿ ಮಸಾಜ್ ಉತ್ತಮ ಪರಿಹಾರ. ಇದರೊಂದಿಗೆ ಕೈ ಬೆರಳುಗಳ ಮಧ್ಯೆ, ಅಂಗಾಲುಗಳಿಗೆ ಕಾಫಿ ಪುಡಿ ಮಸಾಜ್ ಮಾಡಿದರೆ ಫಲಿತಾಂಶ ನಿಮಗೇ ಗೋಚರಿಸುತ್ತೆ.
- ತಲೆಯ ಚರ್ಮವನ್ನು ಸ್ವಚ್ಛಗೊಳಿಸುತ್ತದೆ
ಪ್ರತಿ ಹದಿನೈದು ದಿನಕ್ಕೊಮ್ಮೆ ಹಳೆಯ ಕಾಫಿ ಬೀಜಗಳ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಶಾಂಪೂ ಉಪಯೋಗಿಸಿ ತಲೆಯನ್ನು ತೊಳೆದುಕೊಳ್ಳಿ. ಇದರಿಂದ ತಲೆಬುರುಡೆಯ ಚರ್ಮದಲ್ಲಿರುವ ಕೊಳೆ, ಹೊಟ್ಟು ಮತ್ತು ಇತರ ಕಲ್ಮಶಗಳು ನಿವಾರಣೆಯಾಗುತ್ತವೆ.