ಸಣ್ಣ ವಯಸ್ಸಿನಲ್ಲೇ ಮುಖದಲ್ಲಿ ಸುಕ್ಕು ಅಥವಾ ನೆರಿಗೆಗಳು ಮೂಡದಂತೆ ತಡೆಯಲು ಈ ಸೊಪ್ಪನ್ನು ಹೆಚ್ಚಾಗಿ ಬಳಸಿ
ಸೋಮವಾರ, 9 ಏಪ್ರಿಲ್ 2018 (06:36 IST)
ಬೆಂಗಳೂರು : ನಿಮ್ಮ ಮುಖದಲ್ಲಿ ಸುಕ್ಕು ಅಥವಾ ನರಿಗೆಗಳು ಸಣ್ಣ ವಯಸ್ಸಿನಲ್ಲೇ ಕಾಣಿಸುತ್ತಿರುವುದಕ್ಕೆ ಮುಖ್ಯ ಕಾರಣ ನಿಮ್ಮ ಜೀವನ ಶೈಲಿ, ಆಹಾರ ಪದ್ಧತಿ, ಮಾನಸಿಕ ಒತ್ತಡ. ನೀವು ಇದನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಮಾರ್ಪಾಡು ಮಾಡುವುದರೊಂದಿಗೆ ಸುಲಭವಾಗಿ ನಿಭಾಯಿಸಬಹುದು. ಆದ್ದರಿಂದ ಸೊಪ್ಪು, ತರಕಾರಿಗಳನ್ನು ಹೆಚ್ಚಾಗಿ ಬಳಸಿ.
ಪಾಲಾಕ್ ಸೊಪ್ಪು ಸಹಕಾರಿ: ಸೊಪ್ಪು ಮತ್ತು ತರಕಾರಿಗಳನ್ನು ಬಳಸಿ. ಅದರಲ್ಲೂ ಪಾಲಾಕ್ ಸೊಪ್ಪನ್ನು ಹೆಚ್ಚು ಬಳಸಿ. ಇದರಲ್ಲಿರುವ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಅಕಾಲಿಕ ಚರ್ಮದ ಸುಕ್ಕು, ಗೆರೆಗಳನ್ನು ತಡೆಯುತ್ತದೆ.
ಆಗಸೆ ಬೀಜಗಳನ್ನು ಬಳಸಿ: ಆಗಸೆ ಬೀಜಗಳು ನಿಮ್ಮ ಚರ್ಮದ ತಾಜಾತನ ಹೆಚ್ಚಾಗಿಸುತ್ತವೆ ಮತ್ತು ಚರ್ಮಕ್ಕೆ ಹೊಳಪು ತಂದು ಕೊಡುತ್ತವೆ. ಯೌವನ ಮಾಸದಂತೆ ತಡೆಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ