ಬಿಳಿ ಕೂದಲನ್ನು ಕಪ್ಪು ಮಾಡಲು ಹೀಗೆ ಮಾಡಿ!

ಗುರುವಾರ, 15 ಫೆಬ್ರವರಿ 2018 (08:35 IST)
ಬೆಂಗಳೂರು: ಕೂದಲು ಬೆಳ್ಳಗಾಗುವ ಸಮಸ್ಯೆಯೇ? ಹಾಗಂತ ಅವರಿವರು ಹೇಳುವ ಸಾಮಾನ್ಯ ಮನೆ ಮದ್ದುಗಳು ಮಾಡಿ ಪ್ರಯೋಜನವಿಲ್ಲ. ಅದಕ್ಕೊಂದು ಮನೆ ಮದ್ದು ಮಾಡಿ ನೋಡಿ.
 

ಅದಕ್ಕೆ ಬೇಕಾಗಿರುವುದು ಎರಡು ಸ್ಪೂನ್ ಚಹಾ ಎಲೆ ಮತ್ತು ನೀರು. ಚಹಾ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ರೂಂ ಟೆಂಪರೇಚರ್ ಗೆ ಆರಿಸಿ. ನಂತರ ಸೋಸಿಕೊಂಡು ಚಹಾ ಎಲೆ ಬೇರ್ಪಡಿಸಿ.

ಒಂದು ಸ್ಪ್ರೇ ಬಾಟಲ್ ಗೆ ಹಾಕಿ ಕೂದಲಿಗೆ ಹಚ್ಚಿಕೊಳ್ಳಿ. ಕೂದಲಿಗೆ ಚೆನ್ನಾಗಿ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ಶುದ್ಧ ನೀರಿನಿಂದ ಕೂದಲು ತೊಳೆದುಕೊಳ್ಳಿ. ಆದರೆ ಶ್ಯಾಂಪೂ ಹಚ್ಚಿ ತಲೆ ಸ್ನಾನ ಮಾಡಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ