ಮುಖದ ಚರ್ಮ ಸುಕ್ಕುಗಟ್ಟದಂತೆ ತಡೆಯಬೇಕಾ...? ಹಾಗಾದರೆ ಈ ಮನೆಮದ್ದನ್ನು ಬಳಸಿ

ಶುಕ್ರವಾರ, 12 ಜನವರಿ 2018 (07:05 IST)
ಬೆಂಗಳೂರು : ಎಲ್ಲರಿಗೂ ತಾವು ಆಕರ್ಷಕವಾಗಿ ಕಾಣಬೇಕು ಎಂಬ ಆಸೆ ಇದ್ದೆಇರುತ್ತದೆ. ಅದಕ್ಕಾಗಿ ತಮ್ಮ ಸೌಂದರ್ಯವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾರೆ. ಒಂದು ವೇಳೆ ಮುಖದ ಮೇಲೆ ಸುಕ್ಕು ಮೂಡಿತೆಂದರೆ ಮಹಿಳೆಯರ ನಗುವೆ ಬಾಡಿಹೋಗುತ್ತದೆ. ಮೂಖದ ಚರ್ಮ ಸುಕ್ಕುಗಟ್ಟದೆ ಯಾವಾಗಲೂ ಯೌವ್ವನದಿಂದ ಕೂಡಿರಲು ಈ ಮನೆಮದ್ದುಗಳನ್ನು ಬಳಸಿ.

 
1 ಚಮಚ ಬಾದಾಮಿ ಎಣ್ಣೆಗೆ ದಾಳಿಂಬೆ ರಸ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಸುಕ್ಕುಗಳು ದೂರವಾಗುತ್ತವೆ. ಹಾಗೆ ದಾಳಿಂಬೆ ರಸಕ್ಕೆ 1ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ಒಣತ್ವಚೆ ಮಾಯವಾಗುತ್ತದೆ. ಹೊರಗಡೆ ಹೋಗಿ ಮನೆಗೆ ಬಂದ ತಕ್ಷಣ ದಾಳಿಂಬೆ ರಸಕ್ಕೆ 1ಚಮಚ ನಿಂಬೆರಸ ಮಿಶ್ರಣ ಮಾಡಿಮುಖಕ್ಕೆ ಹಚ್ಚಿಕೊಂಡರೆ ಮುಖ ಮೃದುಗೊಳ್ಳುತ್ತದೆ. ಹಾಗೆ ಇದನ್ನು ಪ್ರತಿದಿನ ಬಳಸುತ್ತಾ ಬಂದರೆ ಮುಖದ ಮೇಲಿನ ಸುಕ್ಕುಗಳು ಹೋಗಿ ತ್ವಚೆಯ ಕಾಂತಿ ಹೆಚ್ಚುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ