ಬೆಂಗಳೂರು : ಕೆಲವೊಮ್ಮೆ ವಿವಿಧ ಕಾರಣಗಳಿಂದ ಅಂಗಾಂಶಗಳಲ್ಲಿ ದ್ರವಪದಾರ್ಥಗಳ ಪ್ರಮಾಣ ಜಾಸ್ತಿಯಾಗಿ ದೇಹದ ಕೆಲವು ಭಾಗಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ದೀರ್ಘ ಪ್ರಯಾಣ ಮಾಡುವುದರಿಂದಲೂ ಕೆಲವರ ಪಾದಗಳಲ್ಲಿ ನೀರು ತುಂಬಿಕೊಂಡು ಊದಿಕೊಳ್ಳುತ್ತದೆ ಇದಕ್ಕೆ ‘ಎಡಿಮಾ’ ಎನ್ನುತ್ತಾರೆ.
ಇದು ಒಂದು ದೊಡ್ಡ ಸಮಸ್ಯೆ ಎನಿಸದಿದ್ದರೂ ಇದು ಮೂತ್ರ ಪಿಂಡದ ವೈಫಲ್ಯ ಅಥವಾ ಹೃದಯರೋಗದ ಸಂಕೇತವಾಗಿರುತ್ತದೆ. ಇದಕ್ಕೆ ಹಲವು ಕಾರಣಗಳಿರುತ್ತದೆ. ಪರಿಷ್ಕೃತ ಆಹಾರಗಳ ಅತಿಯಾದ ಸೇವನೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಅತಿಯಾದ ಸೋಡಿಯಂ ಸೇವನೆಯಿಂದ, ನೀರ್ಜಲಿಕರಣ, ವಿಟಮಿನ್ ಬಿ6, ಮ್ಯಾಗ್ನಿಶಿಯಂ, ಪೊಟ್ಯಾಶಿಯಂ ಕೊರತೆ ಇದಕ್ಕೆ ಕಾರಣ.
ಇದಕ್ಕೆ ಪರಿಹಾರವೆಂದರೆ ಕೆಲವು ಆಹಾರಗಳು. ಇವು ದೇಹದಲ್ಲಿರುವ ನೀರಿನ ಧಾರಣವನ್ನು ತಡೆದು ದೈಹಿಕ ದ್ರವ್ಯಗಳನ್ನು ಸರಿದೂಗಿಸುತ್ತದೆ. ತುರುಚಿ ಎಲೆಗಳು, ಬೆಳ್ಳುಳ್ಳಿ, ಮೆಕ್ಕೆಜೋಳದ ಕೂದಲುಗಳು, ಕಾಡುಸೇವಂತಿಗೆ, ದಾಸವಾಳ ಈ ಪದಾರ್ಥಗಳನ್ನು ಬಳಸಿ ದಿನಕ್ಕೆ ಒಂದೆರಡು ಬಾರಿ ಚಹಾ ಮಾಡಿ ಕುಡಿದರೆ ಈ ಸಮಸ್ಯೆಗೆ ಪರಿಹಾರವನ್ನು ಕಾಣಬಹುದು. ಅದರ ಜೊತೆಗೆ ಸಕ್ಕರೆ ಹಾಗು ಸೋಡಿಯಂ ಸೇವನೆಯಿಂದ ದೂರವಿರಬೇಕು. ಇದರಿಂದ ಕೈಕಾಲು ಊತದಿಂದ ಮುಕ್ತಿಹೊಂದಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ