ಕಾಂತಿಯುಕ್ತ ತ್ವಚೆಗೆ

ಸೋಮವಾರ, 17 ನವೆಂಬರ್ 2014 (16:55 IST)
ಓಟ್ ಮೀಲನ್ನು ನೀರಿನಲ್ಲಿ ಕಲಸಿ ನಂತರ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಅನಂತರ ಒದ್ದೆ ಮಾಡಿಕೊಂಡ ಬೆರಳ ತುದಿಯಿಂದ ವೃತ್ತಾಕಾರವಾಗಿ ಮಸಾಜ್ ಮಾಡಿ. ಸತ್ತ ಚರ್ಮ, ಬ್ಲ್ಯಾಕ್ ಹೆಡ್ ಉದುರಿ ಹೋಗಿ ತ್ವಚೆ ಕಾಂತಿಯುಕ್ತವಾಗುತ್ತದೆ.
 
ಮೊಟ್ಟೆಯ ಬಿಳಿ ಲೋಳೆಗೆ ಸ್ವಲ್ಪ ಲಿಂಬೆರಸ ಸೇರಿಸಿ ಚೆನ್ನಾಗಿ ಕಲಚಿ ಕಣ್ಣಿನ ಸುತ್ತ ಬಿಟ್ಟು ಮುಖದ ಮೇಲೆ ಹಚ್ಚಿ. ಒಣಗಿದ ಮೇಲೆ ಮುಖ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ಚರ್ಮ ಸ್ವಚ್ಛ, ಸುಂದರ ಹಾಗೂ ನುಣುಪು.
 
ಒಂದು ಚಮಚ ಎಳ್ಳೆಣ್ಣೆಗೆ ಚಿಟಿಕೆ ಅರಿಶಿನಪುಡಿ ಹಾಗ ಸ್ವಲ್ಪ ಉಪ್ಪು ಬೆರೆಸಿ ಕೈ ಕಾಲುಗಳಿಗೆ ನಿತ್ಯವೂ ತಿಕ್ಕುತ್ತಿದ್ದರೆ ಬೇಡದ ಕೂದಲುಗಳು ಪರಾರಿಯಾಗುತ್ತವೆ.
 
ಅರ್ಧ ಕಪ್ ಮೊಸರಿಗೆ ಒಂದು ಮೊಟ್ಟೆ ಹಾಗೂ ಒಂದು ಟೀ ಚಮಚ ಜೇನು ಬೆರೆಸಿ ತಲೆಯ ಬುಡಭಾಗಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಲೆ ತೊಳೆಯಿರಿ. ಕೂದಲಿಗೆ ಬಲ ಹಾಗೂ ಹೊಳಪು ಸಿಗುತ್ತದೆ.
 
ಮುಳ್ಳುಸೌತೆ, ಅವಕಾಡೋ, ಮೊಟ್ಟೆಯ ಬಿಳಿ ಲೋಳೆ, ಎರಡು ಚಮಚ ಹಾಲಿನ ಪುಡಿ ಬೆರೆಸಿ ಕಲಸಿ ಮುಖ ಹಾಗೂ ಕುತ್ತಿಗೆಗೆ ಮೇಲ್ಮುಖವಾಗಿ ಹಚ್ಚಿ. 30 ನಿಮಿಷ ಹಾಗೇ ಬಿಟ್ಟು ನಂತರ ಒದ್ದೆಕೈಯಿಂದ ಗೋಲಾಕಾರವಾಗಿ ಮಸಾಜ್ ಮಾಡುತ್ತಾ ತೊಳೆಯಿರಿ. ಮುಖ ನುಣುಪಾಗಿ ಸ್ವಚ್ಛ ಹಾಗೂ ಆರೋಗ್ಯ ಕಳೆಯಿಂದ ಹೊಳೆಯುತ್ತದೆ.

ವೆಬ್ದುನಿಯಾವನ್ನು ಓದಿ