ಬೆಂಗಳೂರು: ವಿಪರೀತ ತಲೆನೋವು, ಕಣ್ಣು ಮಂಜಾಗುವುದು, ಮೈಗ್ರೇನ್ ತಲೆನೋವಿನ ಲಕ್ಷಣಗಳು. ಇದು ನಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮೈಗ್ರೇನ್ ತಲೆನೋವು ಇರುವವರು ಕೆಲವೊಂದು ಆಹಾರ ತ್ಯಜಿಸುವುದು ಉತ್ತಮ.
ಎಲ್ಲಾ ರೋಗಗಳ ಮೂಲ ನಮ್ಮ ಆಹಾರ ಶೈಲಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೈಗ್ರೇನ್ ತಲೆನೋವಿಗೆ ಜೀವನಶೈಲಿಯ ಜೊತೆಗೆ ನಮ್ಮ ಆಹಾರ ಶೈಲಿಯೂ ಕಾರಣವಾಗುತ್ತದೆ. ವಿಪರೀತ ತಲೆನೋವಿನಿಂದಾಗಿ ನಮ್ಮ ದೈನಂದಿ ಕೆಲಸಗಳಿಗೂ ತೊಂದರೆಯಾಗುತ್ತದೆ. ಹಾಗಿದ್ದರೆ ಮೈಗ್ರೇನ್ ತಲೆನೋವಿನ ಸಮಸ್ಯೆಯಿರುವವರು ಯಾವ ಆಹಾರವನ್ನು ತ್ಯಜಿಸಬೇಕು ನೋಡೋಣ.
ಮೈಗ್ರೇನ್ ತಲೆನೋವಿರುವವರು ಅತಿಯಾದ ಜಿಡ್ಡು ಪದಾರ್ಥ, ಕ್ಷಾರ ಪದಾರ್ಥಗಳನ್ನು ಅವಾಯ್ಡ್ ಮಾಡಬೇಕಾಗುತ್ತದೆ. ಕೆಫೈನ್ ಅಂಶ ಅಧಿಕವಿರುವ ಆಹಾರಗಳನ್ನೂ ಆದಷ್ಟು ಅವಾಯ್ಡ್ ಮಾಡಿ. ಪಿಜ್ಜಾ-ಬರ್ಗರ್ ನಂತಹ ಜಂಕ್ ಫುಡ್ ಗಳನ್ನು ಸೇವಿಸದೇ ಇದ್ದರೆ ಉತ್ತಮ.
ಇನ್ನು, ಆರೋಗ್ಯಕರ ಆಹಾರವನ್ನು ಸರಿಯಾದ ಹೊತ್ತಿಗೆ ತಿನ್ನುವುದೂ ಅಷ್ಟೇ ಮುಖ್ಯ. ನಿಯಮಿತವಾಗಿ ಆರೋಗ್ಯಕರ ಆಹಾರ ಸೇವಿಸುತ್ತಿರಬೇಕು. ಸಾಕಷ್ಟು ನಿದ್ರೆ ಮಾಡಬೇಕು. ಒತ್ತಡಗಳನ್ನು ಆದಷ್ಟು ದೂರ ಮಾಡಿಕೊಳ್ಳಿ. ಅತಿಯಾದ ಬಿಸಿಲು, ಶೀತಕ್ಕೆ ಮೈ ಒಡ್ಡುವುದನ್ನು ಕಡಿಮೆ ಮಾಡಿ.