ಜ್ವರ ಬಂದಾಗ ನಮ್ಮ ನಾಲಿಗೆ ಸಪ್ಪೆಯೆನಿಸುತ್ತದೆ. ನಮ್ಮ ಇಷ್ಟದ ಆಹಾರ ವಸ್ತುಗಳ ನಿಜವಾದ ರುಚಿಯೂ ನಾಲಿಗೆಗೆ ಗೊತ್ತಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಹೋಳು ನಿಂಬೆ ಹಣ್ಣನ್ನು ತೆಗೆದು ನಾಲಿಗೆಗೆ ಚೆನ್ನಾಗಿ ಉಜ್ಜಿ. ನಿಂಬೆ ರಸದಲ್ಲಿರುವ ವಿಟಮಿನ್ ಸಿ ದೇಹಕ್ಕೆ ಸೇರಿದರೆ ಉತ್ತಮ. ಜೊತೆಗೆ ಇದರಲ್ಲಿರುವ ಹುಳಿ ಅಂಶ ನಾಲಿಗೆಯಲ್ಲಿರುವ ಬಿಳಿ ತೆಗೆದುಹಾಕಿ ರುಚಿ ತಿಳಿಯುವಂತೆ ಮಾಡುತ್ತದೆ.
ನೆಲ ನೆಲ್ಲಿಯಲ್ಲಿ ಜೀರ್ಣಕ್ರಿಯೆ ಸುಗಮಗೊಳಿಸುವ ಅಂಶವೂ ಇದ್ದು, ಹೊಟ್ಟೆ ಹಸಿವು ಹೆಚ್ಚಿಸುವುದುಲ್ಲದೆ, ರುಚಿಯನ್ನೂ ಹೆಚ್ಚಿಸುತ್ತದೆ. ಜ್ವರ ಬಂದಾಗ ಬಾಯಿ ರುಚಿ ಇಲ್ಲದೇ ಇದ್ದಾಗ ಆದಷ್ಟು ಬಿಸಿ ಆಹಾರವನ್ನೇ ಸೇವಿಸಬೇಕು. ಬಿಸಿ ಆಹಾರ ಪದಾರ್ಥ ನಾಲಿಗೆ ಬೇಗನೇ ಸ್ವೀಕರಿಸುತ್ತದೆ.