ಮುಖದ ಮೇಲಿನ ಕೂದಲು ತೆಗೆಯಲು ಸುಲಭ ಪರಿಹಾರ

ಶನಿವಾರ, 9 ಡಿಸೆಂಬರ್ 2017 (18:08 IST)
ಬೆಂಗಳೂರು: ಹುಡುಗಿಯರು ಎಷ್ಟೇ ಸುಂದರವಾಗಿದ್ದರು, ಅವರ ಮುಖದ ಮೇಲಿದ್ದ ಕೂದಲು  ಅಂದವನ್ನು ಕೆಡಿಸುತ್ತದೆ. ಅದರಲ್ಲೂ ಬೆಳ್ಳಗಿರುವವರ ಮುಖದಲ್ಲಿ ಅದು ಎದ್ದು ಕಾಣುತ್ತದೆ. ಇದಕ್ಕೆ ಪರಿಹಾರ ಇಲ್ಲಿದೆ. ಮುಖದ  ಕೂದಲು ತೆಗೆಯಲು ವ್ಯಾಕ್ಸ್ ಬಳಸುವ ಬದಲು ನೈಸರ್ಗಿಕ ವಿಧಾನ ಬಳಸಿ.


ಕಡ್ಲೆಹಿಟ್ಟು ಮತ್ತು ಅರಿಶಿನ ಪ್ಯಾಕ್ ಹಚ್ಚುವುದರಿಂದ ಕೂದಲಿನ ನಿವಾರಣೆಯಾಗುತ್ತದೆ. ಈ ಪ್ಯಾಕ ಮಾಡಲು ಸ್ವಲ್ಪ ಕಡ್ಲೆಹಿಟ್ಟು, ಅರಿಶಿನ ಪುಡಿ, ನಿಂಬೆರಸ ಮತ್ತು ನೀರು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಉತ್ತಮ.


ಇನ್ನೊಂದು ವಿಧಾನ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಮೊಸರು ಮತ್ತು ನಿಂಬೆರಸ ಬೆರೆಸಿ ಪೇಸ್ಟ್ ಮಾಡಿ ಪ್ರತಿದಿನ ಹಚ್ಚಿದರೆ ಮುಖದ ಮೇಲಿನ ಕೂದಲು  ಉದುರಿಹೋಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ