ಮೊಡವೆ ಸಮಸ್ಯೆಗೆ ಗ್ರೀನ್ ಟೀ ಪರಿಹಾರ

ಶನಿವಾರ, 9 ಅಕ್ಟೋಬರ್ 2021 (07:21 IST)
ಗಾಳಿಯಲ್ಲಿರುವ ಧೂಳು ಮತ್ತು ಇನ್ನಿತರೆ ಮಾಲಿನ್ಯವು ನಾವು ಹೊರಗಡೆ ಹೋದಾಗ ನಮ್ಮ ಮುಖಕ್ಕೆ ಅಂಟಿಕೊಂಡು ಮನೆಗೆ ಬಂದ ನಂತರ ಮುಖವನ್ನು ಸಾಬುನಿನಿಂದ ತೊಳೆಯದೆ ಹಾಗೆ ಬಿಡುತ್ತೇವೆ.

ಆ ಧೂಳಿನಿಂದ ನಮ್ಮ ಮುಖದ ಮೇಲೆ ಅನೇಕ ರೀತಿಯ ಮೊಡವೆಗಳು ಆಗುತ್ತವೆ.ಅದರಲ್ಲೂ ಕಾಲೇಜು ಹೋಗುವ ಹುಡುಗ ಹುಡುಗಿಯರಿಗಂತೂ ಈ ಮೊಡವೆಗಳು ತುಂಬಾನೇ ಮುಜುಗರ ತರುತ್ತದೆ ಎಂದರೆ ತಪ್ಪಾಗುವುದಿಲ್ಲ. ಅವರು ಈ ಮೊಡವೆಗಳಿಂದ ಮುಕ್ತಿ ಪಡೆಯಲು ಬಳಸದ ಕ್ರೀಮ್ಗಳೇ ಇರುವುದಿಲ್ಲ. ಪ್ರತಿದಿನ ನಮಗೆ ಈ ಮೊಡವೆಗಳಿಂದ ನಮ್ಮ ಮುಖವನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಹೊಸ ಹೊಸ ಸಲಹೆಗಳು ಸಿಗುತ್ತಲೇ ಇರುತ್ತವೆ. ಆದರೆ ಇದರಲ್ಲಿ ಯಾವುದು ಸರಿ ಎನ್ನುವ ಗೊಂದಲ ಮಾತ್ರ ನಮ್ಮಲ್ಲಿ ಸದಾ ಇರುತ್ತದೆ.
ನೀವು ನೈಸರ್ಗಿಕವಾಗಿ ಯಾವುದೇ ಕ್ರೀಮ್ಗಳನ್ನು ಮುಖಕ್ಕೆ ಹಚ್ಚದೆಯೇ ನಿಮ್ಮ ಮೂಖದ ಮೇಲಿನ ಮೊಡವೆಗಳು ಹೋಗಲಾಡಿಸಿಕೊಳ್ಳಬೇಕು ಎಂದು ನಿಮಗೆ ಅನ್ನಿಸಿದರೆ ಇಲ್ಲೊಂದು ಉಪಾಯವಿದೆ.
ಸಂಶೋಧಕರು ಗ್ರೀನ್ ಟೀ ಕುಡಿಯುವುದರಿಂದ ಮತ್ತು ಅವುಗಳನ್ನು ಮುಖದಲ್ಲಿ ಮೊಡವೆ ಆದ ಜಾಗದಲ್ಲಿ ಹಚ್ಚುವುದರಿಂದಲೂ ಮೊಡವೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದ್ದಾರೆ.
ಮೊಡವೆ ಹೋಗಲಾಡಿಸುವಲ್ಲಿ ಗ್ರೀನ್ ಟೀ ಹೇಗೆ ಸಹಾಯ ಮಾಡುತ್ತದೆ?

ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ಸ್ ಎಂಬ ಅಂಶವಿರುತ್ತದೆ. ಈ ಸಸ್ಯ-ಆಧಾರಿತ ಸಂಯುಕ್ತಗಳು ಅಥವಾ ಪಾಲಿಫಿನಾಲ್ಗಳು ಉತ್ಕರ್ಷಣ ನಿರೋಧಕ, ಉರಿಯೂತ ನಿರೋಧಕ ಮತ್ತು ಪ್ರತಿಜೀವಕ ಗುಣಲಕ್ಷಣಗಳನ್ನು ಹೊಂದಿವೆ. ಗ್ರೀನ್ ಟೀ ವಿಶೇಷವಾಗಿ ಎಪಿಗಾಟೋಲೆಚಿನ್ ಗ್ಯಾಲೇಟ್ ಹೊಂದಿದ್ದು, ಇದು ಸಂಶೋಧನೆಯ ವಿಶ್ವಾಸಾರ್ಹ ಮೂಲವು ತೋರಿಸಿದ ಪಾಲಿಫಿನಾಲ್ ಮೊಡವೆ ಮತ್ತು ಎಣ್ಣೆಯುಕ್ತ ಚರ್ಮವನ್ನು ಸುಧಾರಿಸುತ್ತದೆ.
ಉರಿಯೂತ ನಿರೋಧಕ, ಉತ್ಕರ್ಷಣ ನಿರೋಧಕ ಮತ್ತು ಸೂಕ್ಷ್ಮಜೀವಿ ನಿರೋಧಕ ಗುಣಲಕ್ಷಣಗಳನ್ನು ಹೊಂದುವುದರ ಜೊತೆಗೆ, ಲಿಪಿಡ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಆ್ಯಂಡ್ರೋಜೆನಿಕ್ ವಿರೋಧಿಯಾಗಿದೆ, ಇದು ಚರ್ಮದಲ್ಲಿ ಸೆಬಮ್ (ತೈಲ) ಕಡಿಮೆ ಮಾಡುತ್ತದೆ.
ಮೊಡವೆಗಳಿಗೆ ಗ್ರೀನ್ ಟೀ ಅನ್ನು ಹೇಗೆ ಬಳಸುವುದು
 ನಿಮ್ಮ ಮುಖದ ಮೇಲಿನ ಮೊಡವೆಗಳಿಂದ ಮುಕ್ತಿ ಪಡೆಯಲು ಗ್ರೀನ್ ಟೀ ಬಳಸಲು ನೀವು ಸಿದ್ಧರಿದ್ದರೆ, ನಿಮಗೆ ಹಲವಾರು ವಿಭಿನ್ನ ಆಯ್ಕೆಗಳಿವೆ.
ಮೊಡವೆಗಳಿಗೆ ಗ್ರೀನ್ ಟೀ ಮಾಸ್ಕ್
 ಗ್ರೀನ್ ಟೀ ಎಲೆಗಳನ್ನು ತೆಗೆದುಕೊಂಡು ಬೆಚ್ಚಗಿನ ನೀರಿನಲ್ಲಿ ಹಾಕಿಕೊಂಡು ತೇವಮಾಡಿ. ನಂತರ ಎಲೆಗಳನ್ನು ಜೇನುತುಪ್ಪ ಅಥವಾ ಅಲೋವೆರಾ ಜೆಲ್ನೊಂದಿಗೆ ಮಿಶ್ರಣ ಮಾಡಿ. ನಂತರ ಮಿಶ್ರಣವನ್ನು ನಿಮ್ಮ ಮುಖದ ಮೇಲಿನ ಮೊಡವೆ ಇರುವ ಜಾಗದಲ್ಲಿ ಪ್ರದೇಶಗಳ ಮೇಲೆ ಹರಡಿ. ಆ ಮಾಸ್ಕ್ ಅನ್ನು 10 ರಿಂದ 20 ನಿಮಿಷಗಳ ಕಾಲ ಹಾಗೆ ಮುಖದ ಮೇಲೆ ಬಿಡಿ.
ನೀವು ನಿಮ್ಮ ಮುಖದ ಮಾಸ್ಕ್ ಹೆಚ್ಚು ಪೇಸ್ಟ್ ಮಾಡಿಕೊಳ್ಳಲು ಬಯಸಿದರೆ, ಮಿಶ್ರಣಕ್ಕೆ 1/2 ಚಮಚ ಅಡುಗೆ ಸೋಡಾವನ್ನು ಸೇರಿಸಿಕೊಳ್ಳಿ. ಗ್ರೀನ್ ಟೀ ಮಾಸ್ಕ್ ಅನ್ನು ನೀವು ವಾರಕ್ಕೆ ಎರಡು ಬಾರಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿರಿ.
ಗ್ರೀನ್ ಟೀ ಫೇಶಿಯಲ್ ಮಾಡಿಕೊಳ್ಳುವುದು ಹೇಗೆ?: ಗ್ರೀನ್ ಟೀ ತಯಾರಿಸಿ, ಮತ್ತು ಅದನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ತಣ್ಣನೆಯ ಟೀ ಅನ್ನು ಒಂದು ಬಾಟಲಿಯಲ್ಲಿ ತುಂಬಿಸಿಕೊಳ್ಳಿ. ಸ್ವಚ್ಛವಾದ ಚರ್ಮದ ಮೇಲೆ ಅದನ್ನು ನಿಧಾನವಾಗಿ ಸಿಂಪಡಿಸಿ. ಇದನ್ನು 10 ರಿಂದ 20 ನಿಮಿಷಗಳ ಕಾಲ ನಿಮ್ಮ ಮುಖದ ಮೇಲೆ ಒಣಗಲು ಬಿಡಿ. ಆನಂತರ ತಂಪಾದ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಈ ರೀತಿಯಾಗಿ ಗ್ರೀನ್ ಟೀ ಫೇಶಿಯಲ್ ಅನ್ನು ವಾರಕ್ಕೆ ಎರಡು ಬಾರಿ ಮಾಡಿಕೊಳ್ಳಿ.
ಗ್ರೀನ್ ಟೀ ಕುಡಿಯುವುದು
ಗ್ರೀನ್ ಟೀ ಕುಡಿಯುವುದು ಮೊಡವೆಗಳಿಗೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದಾದರೂ, ಸಂಶೋಧಕರು ಎಷ್ಟು ಬಾರಿ ಇದನ್ನು ಕುಡಿದರೆ ಪರಿಣಾಮಕಾರಿಯಾಗಿರುತ್ತದೆ ಎಂದು ಇನ್ನೂ ದೃಢಪಡಿಸಿಲ್ಲ. ನೀವು ದಿನಕ್ಕೆ ಎರಡರಿಂದ ಮೂರು ಕಪ್ ಕುಡಿಯಲು ಪ್ರಯತ್ನಿಸಬಹುದು ಎಂದು ಕೆಲವೊಬ್ಬರು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ