ಮನೆಯಲ್ಲಿ ಸುಲಭವಾಗಿ ಕಣ್ಣಿನ ಕಾಜಲ್ ತಯಾರಿಸುವುದು ಹೇಗೆಂದು ಗೊತ್ತಾ...?

ಬುಧವಾರ, 3 ಜನವರಿ 2018 (07:57 IST)
ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಕಣ್ಣಿನ ಕಾಜಲ್ ಕೆಮಿಕಲ್ ನಿಂದ ಕೂಡಿದ್ದು ಅದನ್ನು ಬಳಸುವುದರಿಂದ ಕಣ್ಣಿಗೆ ತುಂಬಾ ಹಾನಿಯಾಗುತ್ತದೆ. ಅದರ ಬದಲು ಮನೆಯಲ್ಲೇ ಕಾಜಲ್ ಗಳನ್ನು ತಯಾರಿಸಿಕೊಳ್ಳಿ. ಅದು ನೈಸರ್ಗಿಕವಾಗಿದ್ದು, ಯಾವುದೇ ಕೆಮಿಕಲ್ ಗಳನ್ನು ಬಳಸದ  ಕಾರಣ ಕಣ್ಣಿಗೆ ಯಾವುದೇ ತೊಂದರೆಯಾಗುವುದಿಲ್ಲ.

 
ಒಂದು ಹಣತೆಯನ್ನು ತೆಗೆದುಕೊಂಡು ಅದಕ್ಕೆ ಹಸುವಿನ ತುಪ್ಪ ಹಾಕಿ ಬತ್ತಿಯನ್ನು ಇಟ್ಟು ದೀಪವನ್ನು ಹಚ್ಚಿ. ನಂತರ ಅದರ ಸುತ್ತ ಮೂರು ಗ್ಲಾಸ್ ಗಳನ್ನು ಇಟ್ಟು ಒಂದು ಸ್ಟೀಲ್ ಪ್ಲೇಟನ್ನು ಆ ದೀಪದ ಬೆಂಕಿಗೆ ತಾಕುವಂತೆ ಇಡಬೇಕು. ದೀಪ ಉರಿದು ಆರಿಹೋದ ಮೇಲೆ ಆ ಪ್ಲೇಟನ್ನು ತೆಗೆದಾಗ ಪ್ಲೇಟಲ್ಲಿ ಕಪ್ಪು ಬಣ್ಣ ಹಿಡಿದಿರುತ್ತದೆ. ಅದನ್ನು ಒಂದು ಚಮಚದ ಸಹಾಯದಿಂದ ನೀಟಾಗಿ ತೆಗೆದು ಆ ಕಪ್ಪು ಪುಡಿಗೆ 3 ಹನಿ ಹಸುವಿನ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಒಂದು ಸಣ್ಣ ಡಬ್ಬದಲ್ಲಿ ಹಾಕಿ ಫ್ರಿಜ್ ನಲ್ಲಿ 5-10 ನಿಮಿಷ ಇಡಿ. ನಂತರ ತೆಗೆಯಿರಿ. ಕಾಜಲ್ ರೆಡಿಯಾಗಿರುತ್ತದೆ. ಅದನ್ನು ಕಣ್ಣಿಗೆ ಹಚ್ಚುವುದರಿಂದ ತುಂಬಾ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ