ನೈಲ್ ರಿಮೂವರ್ ಖಾಲಿಯಾಗಿದೆಯಾ ?ಮನೆಯಲ್ಲಿ ಸಿಗುವ ಇವುಗಳನ್ನು ಬಳಸಿ ನೈಲ್ ಪಾಲಿಶ್ ತೆಗೆಯಿರಿ

ಗುರುವಾರ, 19 ಜುಲೈ 2018 (06:41 IST)
ಬೆಂಗಳೂರು : ಕೆಲವರು ಪ್ರತಿನಿತ್ಯ ಡ್ರೆಸ್ ಗೆ ತಕ್ಕಂತೆ ನೈಲ್ ಪಾಲಿಶ್ ಹಚ್ಚುತ್ತಾರೆ. ಆಗ ಪ್ರತಿದಿನ ಅವರು ಹಚ್ಚಿದ  ನೈಲ್ ಪಾಲಿಶ್ ಕಲರ್ ಅನ್ನು ತೆಗೆಯುತ್ತಾ ಇರಬೇಕಾಗುತ್ತದೆ. ಅಂತವರಿಗೆ ನೈಲ್ ಪಾಲಿಶ್ ತೆಗೆಯಲು ಸುಲಭ ವಿಧಾನಗಳು ಇಲ್ಲಿವೆ ನೋಡಿ.


*ವೈಟ್​ ವಿನೇಗರ್ : ವಿನೇಗರ್​ನಲ್ಲಿರುವ ಆ್ಯಸಿಡಿಕ್​ ಅಂಶ ನೇಲ್​ ಪೇಂಟ್​ನ್ನು ಸುಲಭವಾಗಿ ತೆಗೆಯಲು ಸಹಾಯ ಮಾಡುತ್ತದೆ. ಮೊದಲು 15-20 ನಿಮಿಷ ಬೆಚ್ಚಗಿನ ನೀರಿನಲ್ಲಿ ಕೈಯನ್ನು ಅದ್ದಿಡಿ. ನಂತರ ವೈಟ್​ ವಿನೇಗರ್​ ಮತ್ತು ನಿಂಬು ರಸವವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಹತ್ತಿ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಉಗುರುಗಳ ಮೇಲೆ ಉಜ್ಜಿ.  ಬಣ್ಣ ಸರಿಯಾಗಿ ಹೋಗುವವರೆಗೂ ಹೀಗೆ ಮಾಡಿ.


*ಡಿಯೋಡ್ರೆಂಟ್ : ಡಿಯೋಡ್ರೆಂಟ್​ನಲ್ಲಿಯೂ ಕೂಡ ನೇಲ್​ ಪಾಲೀಶ್​ ತೆಗೆಯುವಂತಹ ಪದಾರ್ಥಗಳಿವೆ. ನಿಮಗೆ ಡಿಯೋಡ್ರೆಂಟ್​ಗಳಿಂದ ಅಲರ್ಜಿ ಇಲ್ಲದಿದ್ದರೆ ನೀವು ನಿತ್ಯವೂ ಬಳಸುವ ಡಿಯೋಡ್ರೆಂಟ್​ನ್ನು ಉಗುರುಗಳಿಗೆ ಸ್ಪ್ರೇ ಮಾಡಿ ತಕ್ಷಣ ಹತ್ತಿಯಿಂದ ಉಜ್ಜಿ.


*ನಿಂಬೆಹಣ್ಣು : ನೇಲ್​ ಪಾಲೀಶ್​ ತೆಗೆಯಲು ಪೂರಕವಾಗುವ ಎಲ್ಲಾ ಪದಾರ್ಥಗಳು ನಿಂಬೆಹಣ್ಣಿನಲ್ಲಿರುತ್ತವೆ. ಹಾಗಾಗಿ ಸ್ವಲ್ಪ ಕಾಲ ಕೈಯನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ, ನಂತರ ನಿಂಬೆಹಣ್ಣನ್ನು ಉಗುರುಗಳ ಮೇಲೆ ಉಜ್ಜಿ ಬಣ್ಣ ಹೋದ ನಂತರ ಕೈ ತೊಳೆದು ಮಾಯಿಶ್ಚರೈಸರ್​ ಹಚ್ಚಿ.


*ಹ್ಯಾಂಡ್​ ಸ್ಯಾನಿಟೈಸರ್: ಹ್ಯಾಂಡ್​ ಸ್ಯಾನಿಟೈಸರ್​ ಕೂಡ ನೇಲ್​ ಪಾಲೀಶ್​ ಸ್ವಚ್ಛಗೊಳಿಸಲು ಉಪಯೋಗಕಾರಿ. ಸ್ವಲ್ಪ ಸ್ಯಾನಿಟೈಸರ್​ನ್ನು ಉಗುರುಗಳಿಗೆ ಹಚ್ಚಿ, ನಂತರ ಹತ್ತಿಯಿಂದ ಉಜ್ಜಿ ತೆಗೆಯಿರಿ. ನೇಲ್​ಪೇಂಟ್​ ಸಂಪೂರ್ಣವಾಗಿ ಸ್ವಚ್ಛವಾಗುವವರೆಗೂ ಹೀಗೆ ಮಾಡಿ.​


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ