ಅಕ್ಕಿ ತೊಳೆದ ನೀರಿನಿಂದ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ

ಶುಕ್ರವಾರ, 27 ಸೆಪ್ಟಂಬರ್ 2019 (13:34 IST)
ಬೆಂಗಳೂರು: ಮುಖದ ಸೌಂದರ್ಯವನ್ನು ಹೆಚ್ಚಿಸಲು  ದುಬಾರಿ  ಕ್ರೀಂ, ಫೇಸ್ ವಾಶ್ ಗಳನ್ನು ಬಳಸುವ ಬದಲು ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಯಾವುದೇ ದುಷ್ಪರಿಣಾಮ ಅಲ್ಲದೇ, ಸಹಜ ಸೌಂದರ್ಯವನ್ನು ಪಡೆಯಬಹುದು. 
 ಅಕ್ಕಿ ಯಲ್ಲಿ ಆಂಟಿ ಎಜಿಂಗ್ ಅಂಶಗಳು ಹೆಚ್ಚಾಗಿ ಇವೆ. ಹಾಗಾಗಿ ಅಕ್ಕಿ ತೊಳೆದ ನೀರನ್ನು ಮುಖಕ್ಕೆ ಬಳಸುವುದರಿಂದ ಮುಖದ ಸುಕ್ಕನ್ನು ತಡೆಗಟ್ಟಬಹುದು. ಇದನ್ನು  ಪ್ರತಿನಿತ್ಯ ಉಪಯೋಗಿಸುವುದರಿಂದ ಮುಖದ ಅಂದ ಹೆಚ್ಚುತ್ತದೆ. ಅಕ್ಕಿಯನ್ನು ಅರ್ಧಗಂಟೆ ನೆನೆಸಿ ಆಮೇಲೆ ಅದರ ನೀರನ್ನು ಒಂದು ಸ್ಪ್ರೇ ಬಾಟಲಿಗೆ ತುಂಬಿಸಿಕೊಳ್ಳಿ. ಇದನ್ನು ಫ್ರಿಡ್ಜ್ ನಲ್ಲಿಡಿ. ಬೇಕಾದಾಗ ಮುಖಕ್ಕೆ, ತಲೆಯ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ. ಕೂದಲಿಗೆ ಈ ಅಕ್ಕಿ ತೊಳೆದ ನೀರನ್ನು ಕಂಡೀಷನರ್ ರೀತಿ ಉಪಯೋಗಿಸಬಹುದು.

ಇನ್ನು 1 ಚಮಚ ಅಕ್ಕಿಹಿಟ್ಟು, 1 ಚಮಚ ಕಡಲೇಹಿಟ್ಟು, ಒಂದು ಚಿಟಿಕೆ ಅರಿಶಿನ, ಕೆಲವು ಹನಿ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಮಾಸ್ಕ್ ರೀತಿ ಹಚ್ಚಿಕೊಂಡು  ಅದು ಒಣಗಿದ ಮೇಲೆ ನಿಧಾನಕ್ಕೆ ಉಜ್ಜಿಕೊಂಡು ತೊಳೆಯಿರಿ.

ಫೇಶಿಯಲ್ ಟಿಶ್ಯೂ ಅನ್ನು ಅಕ್ಕಿ ತೊಳೆದ ನೀರಿನಲ್ಲಿ ಅದ್ದಿ ಮುಖಕ್ಕೆ ಹಾಕಿಕೊಂಡು ಹತ್ತು ನಿಮಿಷದ ನಂತರ ತೆಗೆಯಿರಿ.

ಅಕ್ಕಿ ತೊಳೆದ ನೀರನ್ನು ಐಸ್  ಟ್ರೇ ಗೆ ಹಾಕಿ ಕ್ಯೂಬ್ಸ್ ಮಾಡಿಕೊಳ್ಳಿ ಇದನ್ನು ಆಗಾಗ ಮುಖಕ್ಕೆ ಮಸಾಜ್ ಮಾಡುವುದರಿಂದ ಮುಖವು ಫ್ರೆಶ್ ಆಗಿ ಕಾಣುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ