ಮುಖ ಬೆಳ್ಳಗಾಗಲು ಮಾಡಿರೊಂದು ಸಿಂಪಲ್ ರೆಸಿಪಿ

ಬುಧವಾರ, 3 ಮೇ 2017 (08:14 IST)
ಬೆಂಗಳೂರು: ಅಂದದ ಮುಖ ಬೇಕೆಂಬುದು ಎಲ್ಲರ ಬಯಕೆ. ಬೆಳ್ಳಗಿನ ಮುಖ ನಿಮ್ಮದಾಗಬೇಕಿದ್ದರೆ ಏನು ಮಾಡಬೇಕು? ಅದಕ್ಕೊಂದು ಸಿಂಪಲ್ ವಿಧಾನ ಹೇಳುತ್ತೇವೆ ಮಾಡಿ ನೋಡಿ.

 
ಅದಕ್ಕೆ ಬೇಕಾಗಿರುವುದು ಕಡಲೆ ಹಿಟ್ಟು, ಹಾಲು ಮತ್ತು ಅರಸಿನದ ಗಡ್ಡೆ. ಮಾಡುವ ವಿಧಾನ ಹೀಗಿದೆ ನೋಡಿ.

ಅರಸಿನ, ಕಡಲೆ ಹಿಟ್ಟು ಮತ್ತು ಹಾಲನ್ನು ಮಿಕ್ಸಿಗೆ ಹಾಕಿ ರುಬ್ಬಿ. ಪೇಸ್ಟ್ ನಂತೆ ದಪ್ಪ ಹಿಟ್ಟಿನಂತಿರಲಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಬಿಡಿ. ನಂತರ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ.

ಈ ರೀತಿ ವಾರಕ್ಕೆ ಮೂರು, ನಾಲ್ಕು ಬಾರಿ ಮಾಡುತ್ತಿದ್ದರೆ ನಿಧಾನವಾಗಿ ನಿಮ್ಮ ಮುಖದ ತ್ವಚೆಯಲ್ಲಿ ಬದಲಾವಣೆ ಕಾಣಬಹುದು. ಯಾವುದೇ ರಾಸಾಯನಿಕ ಬಳಸದೇ ಮಾಡುವ ನ್ಯಾಚುರಲ್ ವಿಧಾನ ಇದಾಗಿರುವುದರಿಂದ ಮಾಡಿ ನೋಡಲು ಅಡ್ಡಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ