ಕಣ್ಣಿಗೆ ಹಾಕಿದ ಮೇಕಪ್ ಸುಲಭವಾಗಿ ತೆಗೆಯುವುದಕ್ಕೆ ಇಲ್ಲಿದೆ ಟಿಪ್ಸ್

ಶುಕ್ರವಾರ, 23 ಫೆಬ್ರವರಿ 2018 (06:58 IST)
ಬೆಂಗಳೂರು : ದಿನವಿಡೀ ತಮ್ಮ ಕಣ್ಣು ಹಾಗೂ ಮುಖ ಸುಂದರವಾಗಿ ಕಾಣಲೆಂದು ಬಹುತೇಕ ಯುವತಿಯರು ಮಸ್ಕರಾ, ಕಾಜಲ್, ಐ ಲೈನರ್, ಲಿಪ್ ಲೈನರ್, ಕ್ರೀಂಗಳು ಹಾಗೂ ಪೌಡರ್'ಗಳನ್ನು ಬಳಸುತ್ತಾರೆ. ಆದರೆ ರಾತ್ರಿ ಹೊತ್ತು ಈ ಮೇಕಪ್ ತೆಗೆಯುವುದೇ ಅತ್ಯಂತ ಕಷ್ಟಕರವಾದ ಕೆಲಸ. ಹಾಗಾದರೆ ಈ ಮೇಕಪ್ ಸುಲಭವಾಗಿ ತೆಗೆಯುವುದಕ್ಕೆ ಇಲ್ಲಿದೆ  ಟಿಪ್ಸ್.

*ಬೇಬಿ ಶ್ಯಾಂಪೂ : ಟಿಯರ್ ಫ್ರೀ ಬೇಬಿ ಶ್ಯಾಂಪೂ ಕಣ್ಣಿಗೆ ಹಾಕಿದ ಲೈನರ್, ಶೇಡ್ ಹಾಗೂ ಮಸ್ಕರಾ ತೆಗೆಯಲು ತುಂಬಾ ಉಪಯೋಗವಾಗುತ್ತದೆ. ಯಾವುದೇ ಉರಿ ಇಲ್ಲದೇ ಬೇಬಿ ಶ್ಯಾಂಪೂ ನಿಮ್ಮ ಸುಲಭವಾಗಿ ಮೇಕಪ್ ತೆಗೆಯಲು ಸಹಾಯ ಮಾಡುತ್ತದೆ. ಶ್ಯಾಂಪೂ ಬಳಸುವಾಗ ತಣ್ಣೀರಿನ ಬದಲಾಗಿ ಉಗುರು ಬೆಚ್ಚಗಿನ ನೀರನ್ನು ಬಳಸಿ.

*ಬೇಬಿ ವೈಪ್ಸ್ : ನಿಮಗೆ ಬೇಬಿ ಶಾಂಪೂ ಬಳಸಲು ಸಾಧ್ಯವಾಗುತ್ತಿಲ್ಲವೆಂದಾದರೆ ನೀವು ಬೇಬಿ ವೈಪ್ಸ್ ಕೂಡಾ ಬಳಸಬಹುದು. ಇದರಲ್ಲೂ ನಿಮಗೆ ತೊಡಕುಂಟಾದರೆ ಪೆಟ್ರೋಲಿಯಂ ಜೆಲ್ಲಿ ಬಳಸಿ. ಇದು ಕೇವಲ ಕಣ್ಣಿನ ಮೇಕಪ್ ಮಾತ್ರವಲ್ಲದೇ, ಇಡೀ ಮುಖದ ಮೇಕಪ್ ಅತ್ಯಂತ ಸುಲಭವಾಗಿ ತೆಗೆಯಲು ಸಹಾಯಕವಾಗುತ್ತದೆ. ಇಷ್ಟೇ ಅಲ್ಲದೇ ಲೋಷನ್ ಬಳಸಿಯೂ ನೀವು ಮೇಕಪ್ ತೆಗೆಯಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ