ಸಿಹಿ ಕುಂಬಳಕಾಯಿ ಬಳಸಿ ಫೇಸ್ ಪ್ಯಾಕ್ ತಯಾರಿಸಿ

Krishnaveni K

ಬುಧವಾರ, 27 ಮಾರ್ಚ್ 2024 (12:42 IST)
WD
ಬೆಂಗಳೂರು: ಸಿಹಿ ಕುಂಬಳ ಕಾಯಿಯನ್ನು ಅಡುಗೆಯಲ್ಲಿ ಮಾತ್ರ ಬಳಸುವುದಲ್ಲ. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಹೇಗೆ ಎಂದು ಇಲ್ಲಿ ನೋಡಿ.

ಸಿಹಿ ಕುಂಬಳಕಾಯಿಯಲ್ಲಿ ಕಿಣ್ವಗಳು, ಎಎಚ್ಎ ಮಟ್ಟ ಸಾಕಷ್ಟಿದೆ. ಇದು ಚರ್ಮದ ಸತ್ತ ಅಂಗಾಂಶವನ್ನು ಕಿತ್ತು ಹಾಕಿ ಮುಖಕ್ಕೆ ಕಾಂತಿ ನೀಡುವ ಸಾಮರ್ಥ್ಯವನ್ನು ಹೊಂದಿದೆ ಹಲವು ಬಗೆಯ ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್ ಇರುವ ಕಾರಣಕ್ಕೆ ಇದು ಚರ್ಮದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಹೀಗಾಗಿ ಕುಂಬಳ ಕಾಯಿ ಸೌಂದರ್ಯ ವರ್ಧಕವಾಗಿ ಬಳಕೆ ಮಾಡಬಹುದಾಗಿದೆ. ಇದನ್ನು ಬಳಸಿಕೊಂಡು ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಎಂದು ನೋಡೋಣ.

ಬೇಕಾಗಿರುವ ಸಾಮಗ್ರಿಗಳು
ಸಿಹಿ ಕುಂಬಳಕಾಯಿ
ಜೇನು ತುಪ್ಪ
ಹಾಲು

ಮಾಡುವ ವಿಧಾನ
ಸಿಹಿ ಕುಂಬಳಕಾಯಿಯನ್ನು ನುಣ್ಣಗೆ ರುಬ್ಬಿಕೊಂಡು ಇದಕ್ಕೆ ಜೇನು ತುಪ್ಪ ಮತ್ತು ಹಾಲು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 10 ನಿಮಿಷಗಳ ಕಾಲ ಬಿಡಿ. ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆದುಕೊಳ್ಳಿ. ಈ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ನಿಮ್ಮ ಮುಖದ ಕಾಂತಿ ವೃದ್ಧಿಯಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ