ಮಂಗಳ ಗೌರಿ ವ್ರತ ಮಾಡುವುದು ಹೇಗೆ

Krishnaveni K

ಮಂಗಳವಾರ, 26 ಆಗಸ್ಟ್ 2025 (08:48 IST)

ಇಂದು ಗೌರಿ ಹಬ್ಬವಾಗಿದ್ದು ಆ ಮಂಗಳ ಗೌರಿ ಕುರಿತು ಹೆಂಗಳೆಯರು ವ್ರತ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುವುದು ಎಂಬ ನಂಬಿಕೆಯಿದೆ. ಮಂಗಳ ಗೌರಿ ವ್ರತ ಮಾಡುವುದು ಹೇಗೆ? ಇಲ್ಲಿದೆ ವಿವರ.

ಬೆಳಿಗ್ಗೆ ಸ್ನಾನ: ಇಂದು ಮುಂಜಾನೆಯೇ ಎದ್ದು ತಲೆ ಸ್ನಾನ ಮಾಡಿ ಶುದ್ಧರಾಗಬೇಕು. ಬ್ರಹ್ಮ ಮುಹೂರ್ತದಲ್ಲಿ ಎದ್ದರೆ ಶುಭ. ಮುಖ್ಯವಾಗಿ ಇಂದು ಉಪವಾಸ ವ್ರತ ಮಾಡಬೇಕು.

ಪೂಜಾ ಸ್ಥಳ ಶುಚಿ ಮಾಡಿ: ಗೌರಿ ಪೂಜೆ ಮಾಡುವ ಸ್ಥಳವನ್ನು ಸ್ವಚ್ಘಗೊಳಿಸಿ ನಂತರ ಮೂರ್ತಿ ಅಥವಾ ಫೋಟೋ ಇಡಬೇಕು.

ದೇವಿಯನ್ನು ಅಲಂಕರಿಸಿ: ಮಂಗಳ ಗೌರಿಗೆ ಹೂ, ಅರಿಶಿನ, ಕುಂಕುಮಗಳಿಂದ ಅಲಂಕರಿಸಿ. ದೇವಿಯ ಫೋಟೋ/ವಿಗ್ರಹದ ಮುಂದೆ ವೀಳ್ಯದೆಲೆ, ಬಳೆ, ಕುಂಕುಮ, ಕನ್ನಡಿ ಇಡಬೇಕು.

ದೀಪಗಳನ್ನು ಬೆಳಗಬೇಕು: ದೇವಿಯ ಮುಂದೆ ಎರಡೂ ಬದಿಯಲ್ಲಿ 8+8 ರಂತೆ 16 ಬತ್ತಿಯ ದೀಪ ಹಚ್ಚಿ.

ನಂತರ ಮಂಗಳ ಗೌರಿ ಸ್ತೋತ್ರವನ್ನು ಪಠಿಸಿ ಆರತಿ ಮಾಡಿ ನೈವೇದ್ಯವಾಗಿ ಸಿಹಿ ತಿನಿಸಿಟ್ಟು ಪೂಜೆ ಮಾಡಿ.

ಇಂದು ಮುತ್ತೈದೆಯರಿಗೆ ಬಾಗಿನ ಕೊಡುವುದು, ದಾನ ಮಾಡುವುದು ಅತ್ಯಂತ ಶ್ರೇಷ್ಠವಾಗಿದೆ. ಸಂಜೆ ದೇವಿಗೆ ಪೂಜೆ ಮಾಡಿದ ಬಳಿಕವೇ ಉಪವಾಸ ವ್ರತ ಮುರಿಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ