ಬೆಂಗಳೂರು: ಮಕ್ಕಳಾಗದವರು, ಅವಿವಾಹಿತರು ಇಷ್ಟಾರ್ಥ ನೆರವೇರುತ್ತದೆಂದು ದೇವಾಲಯಕ್ಕೆ ಹೋದರೆ, ಅಶ್ವತ್ಥ ಮರಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತಾರೆ. ಹೀಗೆ ಮಾಡುವ ಮೊದಲು ಒಂದು ಅಂಶ ನೆನಪಿರಲಿ.
ಅಶ್ವತ್ಥ ಮರಕ್ಕೆ ಸುತ್ತು ಹಾಕುವುದು ಹಗಲು ಹೊತ್ತಿನಲ್ಲಿ ಮಾತ್ರ ಸಮಂಜಸ. ರಾತ್ರಿ ಹೊತ್ತು ಪ್ರದಕ್ಷಿಣೆ ಬರುವುದು ಸರಿಯಲ್ಲ. ಇದು ಪವಿತ್ರ ವೃಕ್ಷ. ಇದನ್ನು ಮನಸ್ಸಿನಿಂದ ಅಥವಾ ದೈಹಿಕವಾಗಿ ಅಶುದ್ಧವಾಗಿರುವಾಗ ಮುಟ್ಟುವುದು ತಪ್ಪು.
ದೇವರ ಗುಡಿಗೆ ಸಂಜೆ ಸುತ್ತು ಬರುವುದಕ್ಕೂ, ಅಶ್ವತ್ಥ ಮರಕ್ಕೆ ಸುತ್ತು ಹಾಕುವುದಕ್ಕೂ ವ್ಯತ್ಯಾಸವಿದೆ. ದೇವರ ಗುಡಿಗೆ ನಿತ್ಯ ಪೂಜೆ, ಶುದ್ಧಿ ಕರ್ಮ ಮಾಡಲಾಗುತ್ತದೆ. ಆದರೆ ಅಶ್ವತ್ಥ ಮರಕ್ಕಿಲ್ಲ. ಹಾಗಾಗಿ ಪಾವಿತ್ರ್ಯತೆಯ ದೃಷ್ಟಿಯಿಂದ ರಾತ್ರಿ ಹೊತ್ತು ಸುತ್ತು ಹಾಕಬಾರದು ಎನ್ನುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ