ತುಳಸಿ ಹಬ್ಬದಂದು ವಿಶೇಷವಾಗಿ ಮಹಾವಿಷ್ಣುವಿನ ಪೂಜೆ ಮಾಡಲಾಗುತ್ತದೆ. ಈ ದಿನ ತುಳಸಿ ಕಟ್ಟೆಗೆ ನೆಲ್ಲಿ ಗಿಡದ ಟೊಂಗೆಯನ್ನು ಇಟ್ಟು ದೀಪವನ್ನು ಹಚ್ಚಿ ಪೂಜೆ ಮಾಡಲಾಗುತ್ತದೆ. ನೆಲ್ಲಿಕಾಯಿ ಇರುವ ಟೊಂಗೆಯನ್ನೇ ಇಟ್ಟು ಪೂಜೆ ಮಾಡಿದರೆ ಶ್ರೇಷ್ಠವಾಗಿದ್ದು, ವಿಶೇಷ ಫಲಗಳನ್ನೂ ಪಡೆಯಬಹುದು.
ದಾಂಪತ್ಯ ಜೀವನದಲ್ಲಿ ಸಮಸ್ಯೆ ಇರುವವರು, ದಾಂಪತ್ಯ ನೆಮ್ಮದಿ, ಸುಖ, ಅಭಿವೃದ್ಧಿಗಾಗಿ ನೆಲ್ಲಿಕಾಯಿಯನ್ನು ತುಳಸಿ ಕಟ್ಟೆಯಲ್ಲಿಟ್ಟು ಪೂಜೆ ಮಾಡಿದರೆ ಉತ್ತಮ. ಜೊತೆಗೆ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ರೀತಿ ಪೂಜೆ ಮಾಡುವುದರಿಂದ ಉತ್ತಮ ಫಲಗಳನ್ನು ಪಡೆಯುತ್ತೀರಿ.
ಮನೆಯಲ್ಲಿ ಮಂಗಳ ಕಾರ್ಯ ಮಾಡುವುದಿದ್ದರೆ ಮನೆ ಮಗಳ ಕೈಯಲ್ಲಿ ನೆಲ್ಲಿಕಾಯಿ, ದೀಪವಿಟ್ಟು ತುಳಸಿಗೆ ಪೂಜೆ ಮಾಡಲು ಹೇಳಿ. ಇದರಿಂದ ಒಳಿತಾಗುವುದು. ಹಿಂದೂ ಧರ್ಮದಲ್ಲಿ ತುಳಸಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ ಹೆಣ್ಣು ಮಕ್ಕಳು ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಾರೆ.