ಇಂದು ಚಂದ್ರಗ್ರಹಣ: ಯಾವ ನಕ್ಷತ್ರದವರಿಗೆ ದೋಷ?

ಸೋಮವಾರ, 7 ಆಗಸ್ಟ್ 2017 (09:48 IST)
ಬೆಂಗಳೂರು: ಶ್ರೀ ಹೇವಿಳಂಬಿ ನಾಮ ಸಂವತ್ಸರದ ಶ್ರಾವಣ ಮಾಸ ಶುಕ್ಷ ಹುಣ್ಣಿಮೆ ಆಗಸ್ಟ್ 7, 2017 ರಂದು ಶ್ರವಣಾ ನಕ್ಷತ್ರ ಮಕರಾ ರಾಶಿಯಲ್ಲಿ ಚೂಡಾಮಣಿ ಕೇತುಗ್ರಸ್ತ ಪಾರ್ಶ್ವ ಚಂದ್ರಗ್ರಹಣ ಸಂಭವಿಸುತ್ತದೆ.

 
ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗುವುದರಿಂದ ಇಂದು ನಮ್ಮ ದೇಶದಲ್ಲಿ ಗ್ರಹಣ ಆಚರಣೆಯಿದೆ. ಶ್ರವಣ ನಕ್ಷತ್ರದವರಿಗೆ ಈ ಗ್ರಹಣದ ದೋಷವಿರುತ್ತದೆ. ಹೀಗಾಗಿ ಈ ನಕ್ಷತ್ರದವರು ಗ್ರಹಣ ಕಾಲದಲ್ಲಿ ಗ್ರಹಣ ಸ್ತೋತ್ರ ಪಠಿಸಿ ನಂತರ ತಾಂಬೂಲ ದಕ್ಷಿಣೆ ದಾನ ಮಾಡಬಹುದು.

ಗ್ರಹಣ ಸ್ಪರ್ಶ ಕಾಲ: ರಾತ್ರಿ 10.53
ಗ್ರಹಣ ಮಧ್ಯ ಕಾಲ: ರಾತ್ರಿ 11.50
ಗ್ರಹಣ ಮೋಕ್ಷ ಕಾಲ: ರಾತ್ರಿ 12.48

ಶಾಸ್ತ್ರಗಳ ಪ್ರಕಾರ ಇಂದು ಸಂಧ್ಯಾಕಾಲದ ನಂತರ ಭೋಜನ ಸ್ವೀಕರಿಸಬಾರದು. ವೃದ್ಧರು, ಮಕ್ಕಳು, ರೋಗಿಗಳು ಮಾತ್ರ ಲಘು ಉಪಾಹಾರ ಸೇವಿಸಬಹುದು.

ಇದನ್ನೂ ಓದಿ.. ಅಮೀರ್ ಖಾನ್, ಪತ್ನಿಗೆ ಎಚ್1ಎನ್1
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ