ಒಳ್ಳೆಯ ಪತ್ನಿ, ಐಶ್ವರ್ಯ ಸಿಗಬೇಕಾದರೆ ಏನು ಮಾಡಬೇಕು ಗೊತ್ತಾ?
ಮಂಗಳವಾರ, 11 ಡಿಸೆಂಬರ್ 2018 (09:12 IST)
ಬೆಂಗಳೂರು: ಪ್ರತಿಯೊಬ್ಬರೂ ಪ್ರತಿದಿನ ಪ್ರಾರ್ಥನೆ ಮಾಡುವಾಗ ಒಳ್ಳೆಯ ಜೀವನ ಸಂಗಾತಿ, ಸಕಲ ಐಶ್ವರ್ಯಗಳನ್ನು ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಹಾಗಿದ್ದರೆ ಒಳ್ಳೆಯ ಪತ್ನಿ, ಆರೋಗ್ಯ, ಐಶ್ವರ್ಯ ಲಭಿಸಬೇಕಾದರೆ ಏನು ಮಾಡಬೇಕು ಗೊತ್ತಾ?
ಸಾಲಿಗ್ರಾಮವನ್ನು ಪೂಜಿಸಬೇಕು. ಸಾಲಿಗ್ರಾಮ ಎಂಬುದು ಒಂದು ಶಿಲೆ. ಭೂಮಿಯ ಮೇಲೆ ಕೋಟ್ಯಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮವಿದೆ. ಒಂದು ಸಾಲಿಗ್ರಾಮವನ್ನು ಪೂಜಿಸಿದರೆ ನೂರು ಶಿವಲಿಂಗಗಳ ದರ್ಶನಕ್ಕೆ ಸಮ ಎಂಬ ಮಾತಿದೆ.
ಪದ್ಮ ಪುರಾಣದ ಪ್ರಕಾರ ಸಾಲಿಗ್ರಾಮವನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಒಳ್ಳೆಯ ಪತ್ನಿ, ಮಕ್ಕಳು, ಆರೋಗ್ಯ, ಐಶ್ವರ್ಯ, ಶಾಂತಿ ಸಿಗಬೇಕಾದರೆ ಸಾಲಿಗ್ರಾಮವನ್ನು ಪೂಜಿಸಬೇಕು. ಇದರ ನೀರಿನ ಸ್ಪರ್ಶದಿಂದ ಚಿಂತೆ, ಒತ್ತಡ, ಕಡಿಮೆಯಾಗುತ್ತದೆ. ಸಕಲ ಇಚ್ಛೆಗಳೂ ಪೂರೈಸುತ್ತದೆ.
ಸಾಲಿಗ್ರಾಮದಲ್ಲಿ ದಿವ್ಯ ಶಕ್ತಿಯಿದ್ದು, ಇದಕ್ಕೆ ಅಭಿಷೇಕ ಮಾಡಿದ ಪದಾರ್ಥ ಸೇವಿಸಿದರೆ (ಹಾಲು ಮೊಸರು ಇತ್ಯಾದಿ) ಆರೋಗ್ಯ ವೃದ್ಧಿಯಾಗುತ್ತದೆ.
ಪ್ರತಿ ಮನೆಯಲ್ಲೂ ಸಾಲಿಗ್ರಾಮವಿರಬೇಕು. ವಿಷ್ಣುವಿನ ದಶಾವತಾರದ ಸಾಲಿಗ್ರಾಮ, ಶಿವಲಿಂಗದ ಸಾಲಿಗ್ರಾಮ, ಶ್ರೀ ಚಕ್ರ ಸಾಲಿಗ್ರಾಮ ಹೀಗೆ ಅನೇಕ ರೀತಿಯಲ್ಲಿ ಸಾಲಿಗ್ರಾಮ ಪೂಜೆ ನಾನಾ ಫಲಗಳಿಗೆ ಅನ್ವಯಿಸಿವೆ. ಆದರೆ ಹೆಣ್ಣು ಮಕ್ಕಳು ಸಾಲಿಗ್ರಾಮವನ್ನು ಪೂಜಿಸುವ ಮತ್ತು ಮುಟ್ಟುವ ಅಧಿಕಾರ ಹೊಂದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ