ಮಂಗಳ ಕಾರ್ಯದಲ್ಲಿ ಮಾವಿನ ಸೊಪ್ಪಿನ ತೋರಣೆ ಏಕೆ?

ಭಾನುವಾರ, 21 ಮೇ 2017 (04:29 IST)
ಬೆಂಗಳೂರು: ಯಾವುದೇ ಮಂಗಳಕಾರ್ಯವಿರಲಿ, ಹಬ್ಬ ಹರಿದಿನಗಳಿರಲಿ, ಮನೆಯ ಎದುರು ಮಾವಿನ ತೋರಣ ಕಟ್ಟುವ ಸಂಪ್ರದಾಯ ನಮ್ಮಲ್ಲಿ ಹಿಂದಿನಿಂದಲೂ ಬೆಳೆದು ಬಂದಿದೆ.

 
ಹಿಂದೆಲ್ಲಾ ಈಗಿನಂತೆ ಮನೆ ಅಲಂಕಾರ ಮಾಡುವುದಕ್ಕೆ ದುಡ್ಡು ಕೊಟ್ಟು ರಾಶಿ, ರಾಶಿ ಹೂವು ತರುವವರು ಯಾರೂ ಇಲ್ಲ. ಆಗ ಮನೆಯ ಹಿತ್ತಲಲ್ಲಿರುವ ಮಾವಿನ ಮರವೇ ಶೃಂಗಾರ ಸಾಧನ. ಕಾರ್ಯಕ್ರಮ ಅಂದವಾಗಿ ಕಾಣಲಿ, ಮನೆ ಶೃಂಗಾರಗೊಳ್ಳಲಿ ಎಂಬ ಕಾರಣಕ್ಕೆ ಕಟ್ಟುತ್ತಿದ್ದರು.

ಮಾವಿನ ಸೊಪ್ಪಿಗೆ ವಿಶೇಷ ಗುಣವಿದೆ. ಇದನ್ನು ಮನೆಯ ಎದುರು ಕಟ್ಟಿದರೆ, ಯಾವುದೇ ಹುಳ ಹುಪ್ಪಟೆಗಳು ಹೊಸಿಲು ದಾಟಿ ಬರುವುದಿಲ್ಲ. ವಾತಾವರಣವೂ ಶುದ್ಧವಾಗಿರುತ್ತದೆ. ಹೀಗಾಗಿ ಪ್ಲಾಸ್ಟಿಕ್ ತೋರಣಗಳನ್ನೆಲ್ಲಾ ಬಿಟ್ಟು ಲಕ್ಷಣವಾಗಿ ಮನೆಯ ಮುಂದೆ ನೈಜ ಮಾವಿನ ಎಲೆಗಳನ್ನು ಕಟ್ಟಿದರೆ ಅದುವೇ ಭೂಷಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ