ತೀರ್ಥ ಪ್ರಸಾದವನ್ನು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ಯಾಕೆ ಇರಿಸುತ್ತಾರೆ ಗೊತ್ತಾ?
ಬುಧವಾರ, 2 ಜನವರಿ 2019 (09:13 IST)
ಬೆಂಗಳೂರು: ದೇವಾಲಯಗಳಿಗೆ ಹೋದಾಗ ಅರ್ಚಕರು ನೀಡುವ ತೀರ್ಥ ಪ್ರಸಾದದ ಪಾತ್ರೆ ಬೆಳ್ಳಿ ಅಥವಾ ತಾಮ್ರದ್ದು ಆಗಿರುವುದನ್ನು ನೀವು ಗಮನಿಸುತ್ತೀರಿ. ಇದು ಯಾಕೆ ಗೊತ್ತಾ?
ಎಂಟು ಗಂಟೆಗಳಿಗಿಂತಲೂ ಹೆಚ್ಚು ಕಾಲ, ಶುದ್ಧ ನೀರು ಮತ್ತು ತುಳಸಿ ತಾಮ್ರ ಅಥವಾ ಬೆಳ್ಳಿ ಪಾತ್ರೆಯಲ್ಲಿದ್ದರೆ ತ್ರಿದೋಷಗಳನ್ನು ನಿವಾರಿಸುವ ಔಷಧಿಯಾಗಿ ಮಾರ್ಪಾಡಾಗುತ್ತದಂತೆ.
ಇದರಿಂದ ದೈವ ಭಕ್ತಿಯ ಜತೆಗೆ ಅಸ್ತಮಾ, ನೆಗಡಿ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆಯೂ ದೂರವಾಗುತ್ತದೆ. ಅಷ್ಟೇ ಅಲ್ಲ, ತುಳಸಿ ಪಚನ ಕ್ರಿಯೆಗೂ ಸಹಕಾರಿ. ಹೀಗಾಗಿ ತಾಮ್ರ ಅಥವಾ ಬೆಳ್ಳಿಯ ಪಾತ್ರೆಯಲ್ಲಿರುವ ಜಲ ಶ್ರೇಷ್ಠ ಎನ್ನುವ ಕಾರಣಕ್ಕೆ ಇಂತಹ ಲೋಹದ ಪಾತ್ರೆಯಲ್ಲೇ ತೀರ್ಥ ಪ್ರಸಾದವನ್ನು ಶೇಖರಿಸಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ