ಭಕ್ತನಿಗಾಗಿ ತಾನೇ ಬಾಗಿಲು ತೆರೆದು ದರ್ಶನ ಕೊಟ್ಟ ಅಯ್ಯಪ್ಪ ಸ್ವಾಮಿ

Krishnaveni K

ಗುರುವಾರ, 11 ಜನವರಿ 2024 (08:59 IST)
ಮುಂಬೈ: ಭಕ್ತರ ಕರೆಗೆ ಅಯ್ಯಪ್ಪ ಸ್ವಾಮಿ ಕರಗುತ್ತಾನೆ ಎಂಬ ಮಾತಿದೆ. ಇಲ್ಲೊಂದು ದೇವಸ್ಥಾನದಲ್ಲಿ ಆ ಮಾತು ನಿಜವಾಗಿದೆ.

ಮುಂಬೈನ ಆದರ್ಶ ನಗರದ ಅಯ್ಯಪ್ಪ ಗುಡಿಯಲ್ಲಿ ಮಧ‍್ಯರಾತ್ರಿ ಭಕ್ತನೊಬ್ಬನಿಗೆ ಸ್ವತಃ ಅಯ್ಯಪ್ಪ ಸ್ವಾಮಿಯೇ ಬಾಗಿಲು ತೆರೆದು ದರ್ಶನ ಕೊಟ್ಟಿದ್ದಾನೆ! ಆದರೆ ಭಕ್ತನಿಗೆ ದೇವರ ಈ ಪವಾಡ ಗೊತ್ತೇ ಆಗಲಿಲ್ಲ.

ವ್ಯಕ್ತಿಯೊಬ್ಬರು ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯನ್ನು ನೆನೆಯುತ್ತಾ ನಮಸ್ಕರಿಸಿ, ಪ್ರದಕ್ಷಿಣೆ ಬರುತ್ತಾರೆ. ಅವರು ಹಿಂದುಗಡೆ ಪ್ರದಕ್ಷಿಣೆ ಹಾಕಿಕೊಂಡು ಬರುವಾಗ ಬೀಗ ಹಾಕಿದ್ದಾಗ ಮುಂಬಾಗಿಲು ತಾನೇ ತೆರೆದುಕೊಳ್ಳುತ್ತದೆ. ಇದರ ಅರಿವೇ ಇಲ್ಲದೇ ಆ ವ್ಯಕ್ತಿ ದೇವರಿಗೆ ಮತ್ತೆ ಅಡ್ಡಬಿದ್ದು ನಮಸ್ಕರಿಸಿ ಅಲ್ಲಿಂದ ತೆರಳುತ್ತಾರೆ.

ಆದರೆ ಸಿಸಿಟಿವಿ ಕ್ಯಾಮರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ. ಇದನ್ನು ನೋಡಿ ಕೆಲವರು ಇದು ಸ್ವಾಮಿಯ ಪವಾಡ ಎಂದು ಉದ್ಘರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ