ಜವಾನ್ ರಿಲೀಸ್: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಮಾಡುತ್ತಾ ಶಾರುಖ್ ಸಿನಿಮಾ?

ಗುರುವಾರ, 7 ಸೆಪ್ಟಂಬರ್ 2023 (08:30 IST)
Photo Courtesy: Twitter
ಮುಂಬೈ: ಬಾಲಿವುಡ್ ಗೆ ಮತ್ತೊಂದು ಬ್ರೇಕ್ ಕೊಡಲು ಶಾರುಖ್ ಖಾನ್ ರೆಡಿಯಾಗಿದ್ದಾರೆ. ಶಾರುಖ್ ನಾಯಕರಾಗಿರುವ ಸೌತ್ ನಿರ್ದೇಶಕ ಅಟ್ಲೀ ನಿರ್ದೇಶನದ ಜವಾನ್ ಸಿನಿಮಾ ಇಂದು ರಿಲೀಸ್ ಆಗಿದೆ.

ಜವಾನ್ ಸಿನಿಮಾಗೆ ಬಿಡುಗಡೆಗೆ ಮೊದಲೇ ಭಾರೀ ಬೇಡಿಕೆಯಿತ್ತು. ಹೀಗಾಗಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮೂಲಕವೇ ಚಿತ್ರ ಸೂಪರ್ ಹಿಟ್ ಆಗುವ ನಿರೀಕ್ಷೆಯಿತ್ತು.

ಮಾರುಕಟ್ಟೆ ತಜ್ಞರ ಪ್ರಕಾರ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೊದಲ ದಿನ 65-70 ಕೋಟಿ ರೂ. ಬ್ಯುಸಿನೆಸ್ ಮಾಡಲಿದೆ. ಅಡ್ವಾನ್ಸ್ ಬುಕಿಂಗ್ ಮೂಲಕ 7.5 ಲಕ್ಷ ಟಿಕೆಟ್ ಮಾರಾಟವಾಗಿದ್ದವು. ಹೀಗಾಗಿ ಮೊದಲ ದಿನವೇ ದಾಖಲೆಯ ಗಳಿಕೆ ನಿರೀಕ್ಷೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ