ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲೀಕ್ ಆಯ್ತು 83 ಸಿನಿಮಾ

ಶನಿವಾರ, 25 ಡಿಸೆಂಬರ್ 2021 (20:21 IST)
ಮುಂಬೈ: ರಣವೀರ್ ಸಿಂಗ್ ನಾಯಕರಾಗಿರುವ 1983 ರ ವಿಶ್ವಕಪ್ ಗೆಲುವಿನ ಕತೆ ಹೊಂದಿರುವ ‘83’ ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ.

ಇತ್ತೀಚೆಗೆ ಸಿನಿಮಾ ಪೈರಸಿಯಾಗುವುದು ಹೊಸತೇನಲ್ಲ. ಇದೀಗ 83 ಸಿನಿಮಾವೂ ಹಲವು ವೆಬ್ ಸೈಟ್ ಗಳಲ್ಲಿ ಕೆಲವೇ ಕ್ಷಣಗಳಲ್ಲಿ ಸೋರಿಕೆಯಾದ ಬಗ್ಗೆ ಮಾಹಿತಿ ಬಂದಿದೆ.

ಟೆಲಿಗ್ರಾಂನಂತಹ ಪ್ರಮುಖ ಆಪ್ ಗಳಲ್ಲೇ ಚಿತ್ರ ಸೋರಿಕೆಯಾಗಿರುವುದರಿಂದ ಚಿತ್ರದ ಗಳಿಕೆ ಮೇಲೆ ಹೊಡೆತ ಬೀಳಲಿದೆ. ಇದರಿಂದ ಚಿತ್ರತಂಡಕ್ಕೆ ದೊಡ್ಡ ನಷ್ಟವಾಗಲಿದೆ.  ದೇಶದಾದ್ಯಂತ ಸುಮಾರು 3,500 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ