ಅಭಿ-ಐಶ್ ಡಿವೋರ್ಸ್ ವದಂತಿ: ಅಮಿತಾಭ್ ಕೂಡಾ ಐಶ್ವರ್ಯಾರನ್ನು ಫಾಲೋ ಮಾಡ್ತಿಲ್ಲ
ಬುಧವಾರ, 6 ಡಿಸೆಂಬರ್ 2023 (08:40 IST)
ಮುಂಬೈ: ಬಾಲಿವುಡ್ ರಿಯಲ್ ಲೈಫ್ ಜೋಡಿ, ಬಚ್ಚನ್ ಬಹು ಐಶ್ವರ್ಯಾ ರೈ ಮತ್ತು ಪುತ್ರ ಅಭಿಷೇಕ್ ಬಚ್ಚನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವರದಿ ದಿನೇ ದಿನೇ ದಟ್ಟವಾಗುತ್ತಿದೆ.
ಇತ್ತೀಚೆಗೆ ಅಭಿಷೇಕ್ ತಮ್ಮ ಮದುವೆ ಉಂಗುರವನ್ನು ಧರಿಸದೇ ಸಾರ್ವನಿಕವಾಗಿ ಕಾಣಿಸಿಕೊಂಡಿದ್ದು ಈ ಊಹಾಪೋಹ ದಟ್ಟವಾಗಲು ಕಾರಣವಾಗಿದೆ. ಇದಕ್ಕೆ ಮೊದಲು ಐಶ್ವರ್ಯಾ ದೀಪಾವಳಿ ಸಂದರ್ಭದಲ್ಲಿ ಅಮಿತಾಭ್ ಮನೆಯಲ್ಲಿ ನಡೆದಿದ್ದ ಪೂಜೆಯಲ್ಲೂ ಭಾಗಿಯಾಗಿರಲಿಲ್ಲ.
ಇತ್ತೀಚೆಗೆ ಎಲ್ಲೂ ಅಭಿ-ಐಶ್ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಐಶ್ವರ್ಯಾ ಹುಟ್ಟುಹಬ್ಬಕ್ಕೂ ಅಭಿ ಕಾಟಾಚಾರಕ್ಕೆಂಬಂತೆ ವಿಶ್ ಮಾಡಿದ್ದರು.ಹೀಗಾಗಿ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಈ ನಡುವೆ ಮಾವ ಅಮಿತಾಭ್ ಬಚ್ಚನ್ ಸೊಸೆ ಐಶ್ವರ್ಯಾರನ್ನು ಇನ್ ಸ್ಟಾಗ್ರಾಂನಲ್ಲೂ ಅನ್ ಫಾಲೋ ಮಾಡಿದ್ದಾರೆ. ಆದರೆ ಅಭಿ-ಐಶ್ ಪರಸ್ಪರ ಈಗಲೂ ಒಬ್ಬರನ್ನೊಬ್ಬರ ಖಾತೆ ಫಾಲೋ ಮಾಡುತ್ತಿದ್ದಾರೆ. ಆದರೆ ಅಮಿತಾಭ್ ತಮ್ಮ ಪುತ್ರ, ಮಗಳು, ಮೊಮ್ಮಗಳು ಸೇರಿದಂತೆ ಎಲ್ಲರ ಖಾತೆಗಳನ್ನೂ ಫಾಲೋ ಮಾಡುತ್ತಿದ್ದಾರೆ. ಆದರೆ ಐಶ್ವರ್ಯಾ ಖಾತೆಯನ್ನು ಮಾತ್ರ ಫಾಲೋ ಮಾಡುತ್ತಿಲ್ಲ. ಹೀಗಾಗಿ ಇದು ಕೇವಲ ಅಭಿ-ಐಶ್ ನಡುವಿನ ಭಿನ್ನಾಭಿಪ್ರಾಯವಲ್ಲ. ಇಡೀ ಕುಟುಂಬದೊಳಗಿನ ಭಿನ್ನಾಭಿಪ್ರಾಯ ಎನ್ನಲಾಗುತ್ತಿದೆ.